Connect with us

    LATEST NEWS

    ರಮಾನಾಥ ರೈ ದಿನಾಂಕ ನಿಗದಿ ಪಡಿಸಲಿ ಪ್ರಮಾಣಕ್ಕೆ ಸಿದ್ದ – ಹರಿಕೃಷ್ಣ ಬಂಟ್ವಾಳ

    ರಮಾನಾಥ ರೈ ದಿನಾಂಕ ನಿಗದಿ ಪಡಿಸಲಿ ಪ್ರಮಾಣಕ್ಕೆ ಸಿದ್ದ – ಹರಿಕೃಷ್ಣ ಬಂಟ್ವಾಳ

    ಮಂಗಳೂರು ಜನವರಿ 1 : ಕಾಂಗ್ರೇಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ವಿರುದ್ದ ಉಸ್ತುವಾರಿ ಸಚಿವ ರಮಾನಾಥ ರೈ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂಬ ವಿಷಯದ ಬಗ್ಗೆ ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಕುತೂಹಲ ಘಟ್ಟಕ್ಕೆ ತೆರಳುತ್ತಿದ್ದೆ. ಈ ನಡುವೆ ರಮಾನಾಥ ರೈ ಅವರ ಸವಾಲನ್ನು ಹರಿಕೃಷ್ಣ ಬಂಟ್ವಾಳ ಸ್ವೀಕರಿಸಿದ್ದು, ರಮಾನಾಥ ರೈ ಅವರಿಗೆ ದಿನಾಂಕ ನಿಗದಿ ಪಡಿಸಲು ಸವಾಲೆಸೆದಿದ್ದಾರೆ.

    ರಮಾನಾಥ ರೈ ಅವರು ಬಂಟ್ವಾಳದಲ್ಲಿ ನಡೆದ ಸಮಾರಂಭದಲ್ಲಿ ಪೂಜಾರಿಯವರ ಮನೆಯವರು ಧರ್ಮಸ್ಥಳಕ್ಕೆ ಬರುವುದಾದರೇ ನಾನು ಪ್ರಮಾಣಕ್ಕೆ ಸಿದ್ದ ಎಂದು ಹೇಳಿಕೆ ನೀಡಿದ್ದರು. ಪೂಜಾರಿಯವರ ವಿಚಾರದಲ್ಲಿ ನನ್ನ ತೇಜೋವಧೆಯಾಗುತ್ತಿದೆ ಎಂದು ಭಾವುಕರಾಗಿದ್ದರು.
    ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಉಸ್ತುವಾರಿ ಸಚಿವ ರಮಾನಾಥ ರೈ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

    ರಮಾನಾಥ ರೈ ಅವರು ಪೂಜಾರಿಯವರಿಗೆ ಬೈದಿದ್ದು ಕಾಂಗ್ರೇಸ್ ಮುಖಂಡ ಅರುಣ್ ಕುವೆಲ್ಲೊ ಮುಂದೆ ಹೊರತು ಜನಾರ್ಧನ ಪೂಜಾರಿಯವರ ಕುಟುಂಬದ ಎದುರು ಅಲ್ಲ ಎಂದು ಹೇಳಿದರು. ಜನಾರ್ದನ ಪೂಜಾರಿಯನ್ನು ರೈ ಅವಹೇಳನಕಾರಿಯಾಗಿ‌ ನಿಂದಿಸಿದರ ಬಗ್ಗೆ ಅರುಣ್ ಕುವೆಲ್ಲೋ ಮತ್ತು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಹರಿಕೃಷ್ಣ ಬಂಟ್ವಾಳ ತಿಳಿದ್ದಾರೆ.

    ರಮನಾಥ ರೈ ಅವರು ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಬಂದರೆ ಮುಂದೆ ತೊಂದರೆಯಾಗಬಹುದು ಈ ಹಿನ್ನಲೆಯಲ್ಲಿ ಪೂಜಾರಿಯವರ ಕುಟುಂಬದವರು ಬರುವುದಿಲ್ಲವೆಂದು ಗೊತ್ತಿದ್ದೇ ಅವರು ಕುಟುಂಬದವರು ಕರೆಯುತ್ತಿದ್ದಾರೆ ಎಂದು ಹೇಳಿದರು.

    ನಾನು ಮತ್ತು ಅರುಣ್ ಕುವೆಲ್ಲೋ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ, ರಮಾನಾಥ ರೈಸವಾಲನ್ನು ಸ್ವೀಕರಿಸಿ ಯಾವುದೇ ದಿನಾಂಕ ನಿಗದಿಪಡಿಸಲಿ ನಾನು ಸಿದ್ದ ಎಂದರು.

    ರಮಾನಾಥ ರೈ ಅವರು 1985 ರಲ್ಲಿ ಜಿಲ್ಲಾ ಪಂಚಾಯತ್ ಟಿಕೆಟ್ ನೀಡುವುದಾಗಿ ಹೇಳಿದ್ದರು, ಆ ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು. ರೈ ನನಗೆ ಎಂಎಲ್ ಸಿ ಸೀಟು ಕೊಡುವುದಾಗಿ ಹೇಳಿ ಮುಖ್ಯಮಂತ್ರಿಗಳಲ್ಲಿ ಪ್ರತಾಪ್ ಚಂದ್ರ ಶೆಟ್ಟಿಯವರ ಹೆಸರು ಹೇಳಿದ್ದಾರೆ ಆಶ್ವಾಸನೆ ನೀಡಿ ಮೋಸ ಮಾಡಿದ್ದು ರಮಾನಾಥ ರೈ ಎಂದು ಗುಡುಗಿದರು.

    Share Information
    Advertisement
    Click to comment

    You must be logged in to post a comment Login

    Leave a Reply