LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ಮಂಗಳೂರು ಎಪ್ರಿಲ್ 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಸೊಂಕಿತ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇಲ್ಲಿಯ ತನಕ ಒಟ್ಟು ಪ್ರಕರಣಗಳ ಸಂಖ್ಯೆ 12 ಆಗಿದೆ.
ಮೂರು ಹೊಸ ಪ್ರಕರಣಗಳಲ್ಲಿ ಒಬ್ಬರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಹಾಗೂ ಇನ್ನಿಬ್ಬರು ದೆಹಲಿಯಲ್ಲಿ ತಬ್ಲಿಫ್ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರಾಗಿದ್ದಾರೆ.
ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದವರ ಪೈಕಿ 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಮತ್ತು ಉಳಿದ 20 ಜನರ ವರದಿ ಇನ್ನು ಬಂದಿಲ್ಲ. ಅಲ್ಲದೆ ಅವರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಇನ್ನು ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸದ್ಯದ ಪ್ರಕಾರ 29 ಭಾಗವಹಿಸಿದ ಬಗ್ಗೆ ಮಾಹಿತಿ ಇದ್ದು 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಆಗಿದೆ. ಉಳಿದ 20 ಜನರ ವರದಿಗಾಗಿ ಜಿಲ್ಲಾಡಳಿತ ನೀರಿಕ್ಷೆಯಲ್ಲಿದೆ.
ದೆಹಲಿಗೆ ತೆರಳಿದ್ದ ಓರ್ವ ಯುವಕ ತುಂಬೆಯ ಮದಕ ಬೊಳ್ಳಾಡಿ ಪ್ರದೇಶದ ನಿವಾಸಿಯಾಗಿದ್ದು , ಈ ಗ್ರಾಮದಲ್ಲಿ 500ಕ್ಕೂ ಮನೆಗಳಿವೆ. ತಹಶೀಲ್ದಾರ್ ಮತ್ತು ಎಸ್ ಐ ಸ್ಥಳಕ್ಕೆ ಆಗಮಿಸಿದ್ದು ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಯಾರು ಮನೆಯಿಂದ ಹೊರಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎನ್ನಲಾಗಿದೆ