ಜನರ ಅನಗತ್ಯ ಓಡಾಟಕ್ಕೆ ಉಡುಪಿ ಜಿಲ್ಲಾಧಿಕಾರಿ ಗರಂ.. ಇದೇ ರೀತಿ ಮುಂದುವರೆದರೆ ಖಾಸಗಿ ವಾಹನ ಬ್ಯಾನ್ ನ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಉಡುಪಿ ಎಪ್ರಿಲ್ 4: ಲಾಕ್ ಡೌನ್ ಹೊರತಾಗಿಯೂ ಉಡುಪಿ ಜನರು ಬೇಕಾಬಿಟ್ಟಿ ಅನಗತ್ಯವಾಗಿ ವಾಹನ ಸಂಚಾರ ಕಂಡು ಬರತ್ತಿರುವುದಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗರಂ ಆಗಿದ್ದು, ಇದೇ ರೀತಿ ಮುಂದುವರೆದರೆ ಪಕ್ಕದ ದಕ್ಷಿಣಕನ್ನಡ ಜಿಲ್ಲೆಯಂತೆ ಖಾಸಗಿ ವಾಹನ ಸಂಚಾರವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಉಡುಪಿಯಲ್ಲಿ ಮಾಹಿತಿ ನೀಡಿದ ಅವರು ಬೆಳಿಗ್ಗೆ 7 ರಿಂದ 11 ಗಂಟೆಯವರಗೆ ಅವಶ್ಯಕ ವಸ್ತು ಖರೀಧಿಗೆ ಅವಕಾಶ ನೀಡಲಾಗಿದೆ. ಆದರೂ ಇವತ್ತು ಜನ ಸಂಚಾರ ಹೆಚ್ಚಿರೋದು ಗಮನಕ್ಕೆ ಬಂದಿದೆ, ಇದೇ ರೀತಿ ಜನರು ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದ ಅವರು ಇದೇ ರೀತ ಹಿಗೇ ಓಡಾಡಿದ್ರೆ ಖಾಸಗಿ ವಾಹನ ಸಂಚಾರ ಬ್ಯಾನ್ ಮಾಡ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಈವರೆಗೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಮೂವರು ಕೊರೊನಾ ಸೊಂಕಿತರು ಚೇತರಿಸಿಕೊಳ್ಳುತ್ತಿದ್ದು, ಮೊದಲು ದಾಖಲಾದ ರೋಗಿ ಸಾಕಷ್ಟು ಸುಧಾರಣೆಯಾಗಿದ್ದಾರೆ. ಅವರ ಎರಡು ಟೆಸ್ಟ್ ಬಾಕಿಯಿದ್ದು ಬಳಿಕ ಡಿಸ್ಚಾರ್ಜ್ ಮಾಡಲಾಗುವುದು ಎಂದರು.

ಉಡುಪಿಯಲ್ಲಿ ಸದ್ಯ ಯಾವುದೇ ಪಾಸಿಟಿವ್ ಪ್ರಕಕಣ ಬಂದಿಲ್ಲ, ವಿದೇಶದಿಂದ ಬಂದವರ 14 ದಿಗಳ ಕ್ವಾರಂಟೈನ್ ಅವಧಿ ಬಹುತೇಖ ಮುಗಿದಿದೆ .2000 ಕ್ಕೂ ಅಧಿಕ ಮಂದಿ ಕ್ವಾರಂಟೈನ್ ಪೂರೈಸಿದ್ದಾರೆ. ನಾಳೆ ಬಹುತೇಖ ಎಲ್ಲರ 14 ದಿನ ಕ್ವಾರಂಟೈನ್ ಮುಗಿಯುತ್ತೆ, ನಂತರವೂ ಕೆಲವು ದಿನಗಳ ಫಾಲೋಅಪ್ ಬೇಕು, ಡಿಸಿ ಕಚೇರಿಯಿಂದಲೇ ದಿನನಿತ್ಯ ಫೋನ್ ಮಾಡಿ ಫಾಲೋಅಪ್ ಮಾಡ್ತೇವೆ ಎಂದರು. ನಮ್ಮ ಜಿಲ್ಲೆಯಲ್ಲಿ ಕಮ್ಯುನಿಟಿ ಸ್ಪ್ರೆಡ್ ಆತಂಕ ಇಲ್ಲ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ದಾಖಲಾತಿ ಕಡಿಮೆಯಾಗಿದೆ. ಹಿಂದೆ 20-25 ಜನ ದಾಖಲಾದ್ರೆ ಈಗ ನಾಲ್ಕೈದಕ್ಕೆ ಇಳಿದಿದೆ ಎಂದರು.