LATEST NEWS
ದಕ್ಷಿಣಕನ್ನಡ ಫಸ್ಟ್ ನ್ಯೂರೋ ಸಂಪರ್ಕ ಕಾರ್ಕಳ ಮೂಲದ ಇಬ್ಬರಿಗೆ ಕೊರೊನಾ ಸೊಂಕು

ದಕ್ಷಿಣಕನ್ನಡ ಫಸ್ಟ್ ನ್ಯೂರೋ ಸಂಪರ್ಕ ಕಾರ್ಕಳ ಮೂಲದ ಇಬ್ಬರಿಗೆ ಕೊರೊನಾ ಸೊಂಕು
ಮಂಗಳೂರು ಮೇ.12: ಫಸ್ಟ್ ನ್ಯೂರೋ ಸಂಪರ್ಕದಿಂದಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಪ್ರಕರಣ ಹೆಚ್ಚಾಗಾತ್ತಲೆ ಇದ್ದು, ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಉಡುಪಿ ಮೂಲದ ಕಾರ್ಕಳದ ಇಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.
ಮಂಗಳೂರಿನ ಶಕ್ತಿ ನಗರದ 80 ವರ್ಷದ ಕೊರೊನಾ ಸೊಂಕಿ ವೃದ್ದೆಯ ಸಂಪರ್ಕದಿಂದ 52 ವರ್ಷ ಮಹಿಳೆ ಹಾಗೂ 26 ವರ್ಷದ ಯುವಕನಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

P507 ಶಕ್ತಿನಗರದ 80 ವರ್ಷದ ವೃದ್ಧೆಗೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೊರೊನಾ ಸೋಂಕು ತಗುಲಿತ್ತು. ಈ ಸಂದರ್ಭ 50 ವರ್ಷದ ಮಹಿಳೆ ನರ ಸಂಬಂಧಿ ಕಾಯಿಲೆಗೆ ಚಿಕಿತ್ಸೆಗಾಗಿ ಬಂದಿದ್ದರು, ಅವರ ಜೊತೆ 26 ವರ್ಷದ ಯುವಕ ನೋಡಿಕೊಳ್ಳಲು ಬಂದಿದ್ದ. ಫಸ್ಟ್ ನ್ಯೂರೋದಲ್ಲಿ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಫಸ್ಟ್ ನ್ಯೂರೊದಲ್ಲಿ ಇಬ್ಬರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಇಬ್ಬರಿಗೆ ಮೊದಲ ಕೊರೊನಾ ಟೆಸ್ಟ್ ನಡೆಸಿದಾಗ ನೆಗೆಟಿವ್ ಬಂದಿತ್ತು. ಮತ್ತೆ 12 ನೇ ದಿನಕ್ಕೆ ಕೊರೊನಾ ಟೆಸ್ಟ್ ವೇಳೆ ಪಾಸಿಟಿವ್ ಗೋಚರವಾಗಿದೆ. ಸದ್ಯ ಈಗ ಇಬ್ಬರನ್ನೂ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.