Connect with us

JYOTHISHYA

ತಿಳಿಯದೇ ಮಾಡಿದ ಸದಾಚಾರ, ತಿಳಿದೂ ಮಾಡುವ ಅನಾಚಾರ ಎರಡಕ್ಕೂ ವ್ಯತ್ಯಾಸ ಇಲ್ಲವೆ….?

ಲೇಖಕರು: ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆರಾಧಕರು

ಹನುಮಂತ ಅಂದರೆ ಜ್ಞಾನವಂತ ಎಂದರ್ಥ, ಆ ಜ್ಞಾನಿಯನ್ನು ಪೂಜಿಸುವ ಮುನ್ನ ಅವನ ಜನ್ಮರಹಸ್ಯ ತಿಳಿಯುವುದು ಅಗತ್ಯ. ಆ ಪ್ರಾಣದೇವರ ಅವತಾರದ ಬಗ್ಗೆ ಶ್ರೀನಿವಾಸ ಕಲ್ಯಾಣ ಕಥೆಯಲ್ಲಿ ಉಲ್ಲೇಖಿಸಿದಂತೆ ತಿಳಿಸುವ ಪ್ರಯತ್ನ ನನ್ನದು,

ಶ್ರೀನಿವಾಸ ಕಲ್ಯಾಣ ಕಥೆ ಕಲಿಯುಗಕ್ಕೆ ಮಾತ್ರವೇ ಸೀಮಿತವಲ್ಲ, ಈ ಕಥೆಯನ್ನು ಜನಕಮಹಾರಾಜನು ತನ್ನ ಸೀತೆಯ ಆರುವಯಸ್ಸಿನಲ್ಲಿ ವಿವಾಹದ ಬಗ್ಗೆ ದ್ವಂದ್ವ ಬಂದಾಗ ಅದರ ನಿವಾರಣೆಗೆ ಶತಾನಂದರು (ಗೌತಮ ಋಷಿ ಮತ್ತು ಅಹಲ್ಯಾದೇವಿಯ ಮಗ) ಈ ಕಥೆಯನ್ನು ಸೀತಾ ಮತ್ತು ಉಳಿದ ಮೂವರ ವಿವಾಹ ಫಲಕ್ಕಾಗಿ ಶ್ರವಣ ಮಾಡಿಸುತ್ತಾರೆ.

ಇಲ್ಲಿ ತಿರುಮಲೆ ಗೆ ತ್ರೇತಾಯುಗದಲ್ಲಿ ಅಂಜನಾದ್ರಿ ಎಂದು ಕರೆಯುತ್ತಾರೆ, ಕಾರಣ ಅಂಜನಾದೇವಿ ಮಗನಾದ ಆಂಜನೇಯನ ಹುಟ್ಟಿಗಾಗಿ ವ್ರತಾಚರಣೆ ಮಾಡಿ ಸಿದ್ದಿ ಪಡೆದ ಮಹಾ ಕ್ಷೇತ್ರ.


ಕೇಸರಿ ಎಂಬ ದೈವಭಕ್ತ ಅಸುರನು ತ್ರೇತಾಯುಗದಲ್ಲಿ ಪುತ್ರಪ್ರಾಪ್ತಿಗಾಗಿ ರುದ್ರಾಂತರಗತ ನರಸಿಂಹ ದೇವರನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಭಗವಂತ ಗೋಚರಿಸುತ್ತಾನೆ ಆಗ ಕೇಸರಿಯು ಪುತ್ರನ ಪ್ರಸಾದವನ್ನು ಬೇಡುತ್ತಾನೆ. ಆಗ ಭಗವಂತ ನಿನಗೆ ನಾ ಪುತ್ರನನ್ನು ಪ್ರಸಾಧಿಸಲಾರೆ ಕಾರಣ ನಿನಗೆ ಈ ಜನ್ಮದಲ್ಲಿ ಪುತ್ರ ಸಂತಾನದ ಯೋಗವಿಲ್ಲ, ಆದರೆ ನಿನ್ನ ತಪಸ್ಸನ್ನು ವ್ಯರ್ಥ ಮಾಡುವುದಿಲ್ಲ ನಿನಗೆ ಶ್ರೇಷ್ಠ ಕನ್ಯಾ ರತ್ನವನ್ನು ಪ್ರಸಾಧಿಸುತ್ತೇನೆ ಅವಳಲ್ಲಿ ಒಬ್ಬ ಮಹಾ ಪುರುಷನ ಜನನವಾಗುತ್ತದೆ. ಅವನಿಂದ ನಿನ್ನ ಕುಲವು ಉದ್ದಾರವಾಗುತ್ತದೆ ಎಂದು ಹರಸಿ ಅದೃಷ್ಯವಾಗುತ್ತಾನೆ.
ವರದಂತೆಯೇ ಅವನಿಗೆ ಕೆಲ ದಿನಗಳಲ್ಲಿಯೇ ಪುಂಜಕಸ್ಥಳಿ ಎಂಬಾ ಅಪ್ಸರಾ ಸ್ತ್ರೀ ಮಗಳಾಗಿ ಜನಿಸುತ್ತಾಳೆ. ಕಾಲಾಂತರದಲ್ಲಿ ಮದುವೆಯ ವಯಸ್ಕಳಾದಾಗ ಕೇಸರಿಗೆ ಒಂದು ಉಪಾಯ ಹೊಳೆಯುತ್ತದೆ. ತನ್ನ ಹೆಸರಿನ ವರನನ್ನೇ ಹುಡುಕಿ ಮಗಳ ಮದುವೆ ಮಾಡಿದರೆ ಆ ಮಹಾ ಪುರುಷ ಕೇಸರೀಸುತ ಎಂದು ಪ್ರಖ್ಯಾತ ಆಗುತ್ತಾನೆ. ಅದರಿಂದ ಅವನ ಹೆಸರೂ ಸಹಾ ಆಜೀವ ಪರ್ಯಂತ ಲೋಕದಲ್ಲಿ ನೆಲೆಸುತ್ತದೆ ಎಂಬ ಉದ್ದೇಶದಿಂದ ಕೇಸರಿ ಎಂಬ ಹೆಸರಿನ ವರನ ಹುಡುಕಾಟ ಶುರುವಾಗುತ್ತದೆ. ಭಗವಂತನ ಇಚ್ಛೆಯ ಅನ್ವಯ ಕಪಿಸಾಮ್ರಾಜ್ಯದ ರಾಜನಾದ ಕೇಸರಿ ಎಂಬ ರಾಜನೊಂದಿಗೆ ಅಂಜನಾ ದೇವಿಯ ವಿವಾಹವಾಗುತ್ತದೆ.

ಪುತ್ರಸಂತಾನ ಕ್ಕಾಗಿ ಅಂಜನಾದೇವಿ ಮತಂಗ ಋಷಿಗಳ ಮೊರೆ ಹೋಗ್ತಾಳೆ, ಭಗವಂತನ ಅನುಗ್ರಹ ಉಂಟು ಆದರೆ ಸಾಕ್ಷಾತ್ ವಾಯುದೇವರ ಅವತಾರ ಆಗಬೇಕಾದರೆ ತ್ರಿಕರಣಶುದ್ದಿ ಕೂಡಾ ಅಗತ್ಯ. ಆದ್ದರಿಂದ ಮುನಿಗಳು ದ್ವಾದಶಾಬ್ದವ್ರತ ಎಂಬ ಒಂದು ವ್ರತವನ್ನು ಪಂಪಾ ಸರೋವರದ ಪೂರ್ವ ದ್ವಿಗ್ಬಾಗದಲ್ಲಿ ಐವತ್ತು ಯೋಜನಗಳಷ್ಟು ದೂರದಲ್ಲಿ ನರಸಿಂಹಾಶ್ರಮದ ದಕ್ಷಿಣಕ್ಕೆ ನಾರಾಯಣಗಿರಿಯ ಸಮೀಪ ಸ್ವಾಮಿ ಪುಷ್ಕರಣಿಯ ಉತ್ತರಕ್ಕೆ ಆಕಾಶಗಂಗೆ ಇದೆ ಅಲ್ಲಿ ಮಾಡುವಂತೆ ತಿಳಿಸುತ್ತಾರೆ.


ಈ ವ್ರತದ ಪ್ರಕಾರ ನಿತ್ಯದಲ್ಲಿ ಮೂರು ಹೊತ್ತು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ, ಅಶ್ವತ್ಥ ಮರದ ಪ್ರದಕ್ಷಿಣೆ, ವರಾಹ ದೇವರ ದರ್ಶನ ನಂತರ ತೀರ್ಥ ಸೇವನೆ ಹೀಗೆ ಹನ್ನೆರಡು ತಿಂಗಳು ಮಾಡುವುದು. ಆದರೆ ಅವಳು ಆನಂದದಿಂದ ಇದನ್ನು ಇನ್ನೂ ಒಂದು ತಿಂಗಳು ಜಾಸ್ತಿ ಅಂದರೆ ಹದಿಮೂರು ತಿಂಗಳು ಮಾಡಿದಾಗ ನಂತರ ಇವಳ ವ್ರತ ನಿಯಮಕ್ಕೆ ಮೆಚ್ಚಿ ಸಾಕ್ಷಾತ್ ವಾಯುದೇವರು ದಿನಂಪ್ರತಿ ಒಂದು ಫಲವನ್ನು ೧೯ ತಿಂಗಳು ಹದಿಮೂರು ದಿನಗಳ ತನಕ ನೀಡುತ್ತಾ ಬರುತ್ತಾರೆ, ಅದರಿಂದ ಅವಳಿಗೆ ಗರ್ಭದಾರಣೆ ಆಗುತ್ತದೆ. ಇವಳಿಗೆ ಗರ್ಭದಾರಣೆ ಆದದ್ದು ಇಡೀ ಮುನಿಕುಲಕ್ಕೆ ಕನಸಿನ ಮೂಲಕ ಸೂಚನೆ ಸಿಗುತ್ತದೆ. ನಂತರ ಹತ್ತು ತಿಂಗಳ ನಂತರ ಇವಳಿಂದ ಭಗವಂತನ ಅನುಗ್ರಹದಿಂದ ಮುಖ್ಯಪ್ರಾಣದೇವರ/ ವಾಯುದೇವರ ಸಾಕ್ಷಾತ್ ಅವತಾರವಾಗಿ ಅಂಜನೀಪುತ್ರನಾಗಿ, ಕೇಸರಿ ಸುತನೆಂದು ಪ್ರಖ್ಯಾತನಾದ ಅಂಜನೇಯನ ಅವತಾರವಾಗಿದೆ. ರುದ್ರನ ಅಂಶವೂ ಹೌದು ಕಾರಣ ರುದ್ರನು ಸಹಾ ವಾಯುದೇವರ ಅವತಾರವೇ.

ಮತ್ತೊಂದು ವಿಷಯ ಮಗುವಾಗಿದ್ದಾಗ ಸೂರ್ಯನನ್ನು ಹಣ್ಣು ಎಂದು ತಿಳುವಳಿಕೆ ನುಂಗಲು ಯತ್ನಿಸಿದ್ದಲ್ಲ , ರಾವಣಾದಿ ಅಸುರ ಜನಾಂಗಕ್ಕೆ ಭಗವಂತನ ಅವತಾರದ ಸೂಚನೆ ಕೊಡಲು ಮಾಡಿದ ಮಹತ್ಕಾರ್ಯ ಅದು. ರಾಮ – ಲಕ್ಷಣ ರ ಅವತಾರಕ್ಕೆ ಬಹಳ ವರ್ಷಗಳ ಮೊದಲೇ ಬಹಳಷ್ಟು ರಕ್ಕಸರನ್ನು ಲೋಕಕ್ಕೆ ತಿಳಿಯದೆಯೇ ಸಂಹರಿಸಿದ ಮಹಾ ಚೇತನವದು.
ನಮ್ಮೆಲ್ಲರಿಗೂ ಆ ಪ್ರಾಣದೇವರು ರಾಮರಾಯರು ಸಾಕ್ಷಾತ್ಕಾರದ ದಾರಿ ತೋರಿಸಲು ಎಂದು ಆಶಿಸುವ.

Advertisement Advertisement
Click to comment

You must be logged in to post a comment Login

Leave a Reply