FILM
ಈ ವರ್ಷದೊಳಗೆ ಮದುವೆಯಾಗುವುದಾಗಿ ಘೋಷಿಸಿದ ಆ್ಯಂಕರ್ ಅನುಶ್ರೀ

ಬೆಂಗಳೂರು ಎಪ್ರಿಲ್ 09: ಆ್ಯಂಕರ್ ಅನುಶ್ರೀ ಮದುವೆ ಬಗ್ಗೆ ಕೊನೆಗೂ ಅಪ್ಡೆಟ್ ಕೊಟ್ಟದ್ದಾರೆ. ಈ ವರ್ಷದೊಳಗೆ ಮದುವೆಯಾಗುವುದಾಗಿ ಅನುಶ್ರೀ ಹೇಳಿದ್ದಾರೆ.
ಆ್ಯಂಕರ್ ಅನುಶ್ರೀ ಮದುವೆ ಬಗ್ಗೆ ಹಲವು ಭಾರಿ ಸುದ್ದಿಗಳು ಹರಿದಾಡಿತ್ತು, ಯುಟ್ಯೂಬ್ ಚಾನೆಲ್ ಗಳು ಅನುಶ್ರೀ ಮದುವೆ ಬಗ್ಗೆ ಅನೇಕ ಬಾರಿ ಸುದ್ದಿ ಮಾಡಿವೆ. ಇದೀಗ ಅನುಶ್ರೀ ಸ್ವತಃ ಮದುವೆ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
ಅನುಶ್ರೀ ಅವರು ವಿದ್ಯಾಪತಿ ಸಿನಿಮಾಕ್ಕಾಗಿ ವಿಶೇಷ ಇನ್ಸ್ಟಾಗ್ರಾಂ ಲೈವ್ ಒಂದನ್ನು ಮಾಡಿದ್ದರು. ಲೈವ್ನಲ್ಲಿ ಹಲವರು ಕಮೆಂಟ್ ಮಾಡಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಹಲವರು ಅನುಶ್ರೀ ಅವರನ್ನು ಮದುವೆ ಬಗ್ಗೆ ಸಹ ಪ್ರಶ್ನೆ ಮಾಡಿದ್ದಾರೆ. ‘ವಿದ್ಯಾಪತಿ’ ಸಿನಿಮಾದ ನಾಯಕ ನಟ ನಾಗಭೂಷಣ್ ಸಹ ಅನುಶ್ರೀ ಅವರಿಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಅನುಶ್ರೀ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರು, ಈ ವೇಳೆ ಅವರಿಗೆ ಉತ್ತರ ನೀಡುತ್ತಾ, ತಾವು ಇದೇ ವರ್ಷ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ.

ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಅನುಶ್ರೀ ಅವರು ಈ ಹಿಂದೆ ಹೇಳಿಕೊಂಡಿದ್ದರು. ಈಗ ಮತ್ತೆ ಮದುವೆ ಬಗ್ಗೆ ಮಾತನಾಡಿ, ಈ ವರ್ಷ ಮುಗಿಯುವುದರ ಒಳಗಾಗಿ ತಾವು ಮದುವೆ ಆಗಿಯೇ ತೀರುವುದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಅನುಶ್ರೀ ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಆದರೆ ಈ ವರ್ಷ ಮದುವೆ ಆಗುವುದಾಗಿ ಮಾತ್ರ ಹೇಳಿದ್ದಾರೆ.
1 Comment