KARNATAKA
ಅನ್ನೋನ್ಯವಾಗಿದ್ದ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದರು!

ಧಾರವಾಡ: ದಾಂಪತ್ಯದಲ್ಲಿ ಅನ್ನೋನ್ಯವಾಗಿದ್ದ ಹಿರಿಯ ಜೀವಗಳೆರಡು ಸಾವಿನಲ್ಲೂ ಒಂದಾಗಿಯೇ ಇಹಲೋಕ ತ್ಯಜಿಸಿದ್ದಾರೆ.
ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ (82) ಹಾಗೂ ಅವರ ಪತ್ನಿ ಪಾರವ್ವಾ ಆರೇರ(73) ಸೋಮವಾರ ಬೆಳಗಿನ ಜಾವ ತಮ್ಮ ನಿವಾಸದಲ್ಲಿಯ ಇಹಲೋಕ ತ್ಯಜಿಸಿದ್ದಾರೆ ನಾಲ್ವರು ಪುತ್ರಿಯರು 12 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ದಂಪತಿಗಳು ಅಗಲಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪಾರಪ್ಪ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರವಿವಾರ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದವರು, ಬೆಳಕಾಗುವಷ್ಟರಲ್ಲಿಯೇ ಇಹ ಲೋಕಕ್ಕೆ ಪಯಣ ಬೆಳಸಿದ್ದಾರೆ. ಸಾವಿನಲ್ಲಿ ಒಂದಾದ ದಂಪತಿಗಳನ್ನು ನೋಡಿ ದೇವರ ಹುಬ್ಬಳ್ಳಿ ಗ್ರಾಮಸ್ಮರಿಗೂ ಕೂಡ ಮಮ್ಮಲ ಮರುಗಿದ್ದಾರೆ.