LATEST NEWS
ಅಮೋನಿಯಂ ನೈಟ್ರೆಟ್ ಗೆ ಒಂದು ದೇಶದ ರಾಜಧಾನಿಯೇ ಧ್ವಂಸ
ಬೈರೂತ್: 2750 ಟನ್ ಅಮೋನಿಯಂ ನೈಟ್ರೆಟ್ ಸ್ಪೋಟ ಒಂದು ದೇಶದ ರಾಜಧಾನಿಯನ್ನೇ ಧ್ವಂಸಗೊಳಿಸಿದೆ.ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಮಂಗಳವಾರ ನಡೆದ ಈ ಸ್ಪೋಟ ಗದ್ದೆಗಳಿಗೆ ಗೊಬ್ಬರಕ್ಕೆ ಬಳಸುವ ಅಮೋನಿಯಂ ನೈಟ್ರೆಟ್ ಎಂಬ ರಾಸಾಯನಿಕ ವಸ್ತುವಿನ ಇನ್ನೊಂದು ಭೀಕರ ಮುಖವನ್ನು ಅನಾವರಣಗೊಳಿಸಿದೆ.
ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಮಂಗಳವಾರ ಸ್ಫೋಟಗೊಂಡು ರಾಜಧಾನಿಯ ಬಹುತೇಕ ಭಾಗಗಳನ್ನು ಧ್ವಂಸಗೊಳಿಸಿದೆ ಎಂದು ಪ್ರಧಾನಿ ಹಸನ್ ಡಯಾಬ್ ಮಾಹಿತಿ ನೀಡಿದ್ದಾರೆ.
ಈ ಸ್ಪೋಟದಲ್ಲಿ ಈವರೆಗೆ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3,700ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 30 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಬೈರೂತ್ ನ ಬಂದರಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಒಂದು ಗೋದಾಮಿನಲ್ಲಿ ಕಳೆದ ಆರು ವರ್ಷಗಳಿಂದ 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಲಾಗಿತ್ತು ಎಂದು ಲೆಬನಾನ್ ನ ಪ್ರಧಾನಿ ವಕ್ತಾರರು ತಿಳಿಸಿದ್ದಾರೆ.
ಈ ಸ್ಫೋಟದ ತೀವೃತೆಗೆ ಇಡೀ ಬೈರೂತ್ ನಗರವನ್ನೇ ಅಲುಗಾಡಿಸಿದ್ದು, ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟ ಸಂಭವಿಸಿರುವ ಸುತ್ತ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಕೂಡ ಹಲವು ಜನ ಸಿಲುಕಿದ್ದಾರೆ. ಬಂದರು ಪ್ರದೇಶದಲ್ಲಿದ್ದ ಗೋದಾಮುಗಳ ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಬೈರೂತ್ ನಡೆದ ಸ್ಪೋಟದ ವಿಡಿಯೋ ಪೋಟೋಗಳು ಹರಿದಾಡುತ್ತಿದ್ದು, ಮನಕಲಕುವಂತಿದೆ.