Connect with us

    DAKSHINA KANNADA

    ಪಾಲೋಳಿ ಮನೆಯೊಂದರ ಮೇಲೆ ಪೊಲೀಸ ದಾಳಿ;ಎರಡು ಪಿಸ್ತೂಲ್ ಸಹಿತ ಸ್ಪೋಟಕ ಪತ್ತೆ

    ಪುತ್ತೂರು ಅಗಸ್ಟ್ 5: ಯಾವುದೇ ಪರವಾನಗಿ ಇಲ್ಲದ ಅಕ್ರಮ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಆಧಾರದ ಮೇರೆಗೆ ಕಡಬ ಪೊಲೀಸ್​ ಠಾಣಾಧಿಕಾರಿ ರುಕ್ಮಯ ನಾಯ್ಕ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬುಧವಾರ ಬಂಧಿಸಿದೆ. ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಜನಾರ್ಧನ ಗೌಡ ಎಂಬಾತನನ್ನು ಬಂಧಿಸಲಾಗಿದೆ.


    ಈತನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ಪರವಾನಗಿ ಇಲ್ಲದ ಎರಡು ಅಕ್ರಮ ಪಿಸ್ತೂಲ್ ಮತ್ತು ಎರಡು ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಷಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದೆ. ಹೀಗಾಗಿ ಆರೋಪಿ ವಿರುದ್ಧ ಪೊಲೀಸರು ಶಸ್ತ್ರಾಸ್ತಗಳು ಹಾಗೂ ಸ್ಫೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply