Connect with us

    LATEST NEWS

    ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

    ನ್ಯೂಯಾರ್ಕ್, ಮಾರ್ಚ್ 05: ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ಜೊತೆ ಮಾಡಿಕೊಂಡಿದ್ದ ‘ಸಿಸ್ಟರ್‌ ಸಿಟಿ ಒಪ್ಪಂದ’ವನ್ನು ಅಮೆರಿಕದ ನೆವಾರ್ಕ್ ನಗರ ರದ್ದುಗೊಳಿಸಿದೆ.

    ‘ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಈ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದಾರೆ.

    ಪಿಟಿಐ ಸುದ್ದಿಸಂಸ್ಥೆಯ ಪ್ರಶ್ನೆಗೆ ಇ-ಮೇಲ್‌ ಮೂಲಕ ಉತ್ತರಿಸಿರುವ ಅವರು, ಒಪ್ಪಂದ ಮಾಡಿಕೊಂಡಿರುವ ಕುರಿತು ವಿಷಾದವಿದೆ ಎಂದಿದ್ದಾರೆ.

    ನೆವಾರ್ಕ್‌ನ ಸಿಟಿ ಹಾಲ್‌ನಲ್ಲಿ ಜ.12ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಜ.18ರಂದು ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ.

    ಒಂದು ದೇಶದ ನಗರ ಆಡಳಿತವು ಮತ್ತೊಂದು ದೇಶದ ನಗರದೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಗೆ ‘ಸಿಸ್ಟರ್‌ ಸಿಟಿ ಒಪ್ಪಂದ’ ಎನ್ನಲಾಗುತ್ತದೆ. ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳ ವೃದ್ಧಿ ಈ ಒಪ್ಪಂದದ ಉದ್ದೇಶವಾಗಿರುತ್ತದೆ.

    2019 ರಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ) ಸ್ಥಾಪಿಸಲಾಗಿದೆ. 200 ಕೋಟಿ ಹಿಂದೂಗಳು ಇಲ್ಲಿ ವಾಸಿಸುತ್ತಿದ್ದಾರೆ’ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಂಡಿದ್ದು, ಯುಎಸ್‌ಕೆ ವೆಬ್‌ಸೈಟ್‌ನಲ್ಲಿ ಈ ಕುರಿತು ವಿವರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply