DAKSHINA KANNADA
ಅಂಬ್ಯುಲೆನ್ಸ್ ನಲ್ಲಿ ಗಡಿದಾಟಲು ಪ್ರಯತ್ನಿಸಿದ 7 ಮಂದಿ ಆರೆಸ್ಟ್

ಅಂಬ್ಯುಲೆನ್ಸ್ ನಲ್ಲಿ ಗಡಿದಾಟಲು ಪ್ರಯತ್ನಿಸಿದ 7 ಮಂದಿ ಆರೆಸ್ಟ್
ಪುತ್ತೂರು ಎಪ್ರಿಲ್ 19: ಲಾಕ್ ಡೌನ್ ಸಂದರ್ಭ ಅಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುದರ ಮೂಲಕ ಗಡಿ ದಾಟಲು ಯತ್ನಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಬಂಧಿತರನ್ನು ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಜಾಕ್, ರಶೀದ್, ಸಂಶುದ್ದೀನ್, ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ.

ಲಾಕ್ ಡೌನ್ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯ ಗಡಿಗಳನ್ನು ಬಂದ್ ಮಾಡಲಾಗಿದ್ದು, ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಆದರೆ ಆರೋಪಿಗಳು ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಅಂಬ್ಯುಲೆನ್ಸ್ ನಲ್ಲಿ ರಾತ್ರಿ ಮೈಸೂರು ಕಡೆ ಹೊರಟಿದ್ದರು. ಆದರೆ ಕೊಡಗು ಜಿಲ್ಲೆಯ ಕುಶಾಲನಗರ ಸರಹದ್ದಿನ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ಮಾಡಿದಾಗ ಯಾವುದೇ ತುರ್ತು ಸೇವೆಗೆ ಹೋಗದೇ ಲಾಕ್‌ಡೌನ್ ನಿಯಮದಿಂದ ತಪ್ಪಿಸಿಕೊಳ್ಳಲು ಹೋಗುತ್ತಿರುವ ವಿಚಾರ ತಿಳಿದು ಬಂದಿದೆ.
ಈ ಹಿನ್ನಲೆ ಕೊಡಗು ಜಿಲ್ಲಾ ಪೊಲೀಸರು ಮುಂದೆ ಹೋಗಲು ಬಿಡದೇ ಇವರನ್ನು ವಾಪಸು ಕಳುಹಿಸಿದ್ದಾರೆ. ಹಿಂತಿರುಗಿ ಬರುವಾಗ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವಾಗ ಪುತ್ತೂರು ಪೊಲೀಸರು ಅಂಬ್ಯುಲೆನ್ಸ್ ನಲ್ಲಿ ಇದ್ದ ಏಳು ಮಂದಿಯನ್ನ ಬಂಧಿಸಿ, ಆರೋಪಿಗಳ ವಿರುದ್ದ ಸುಮೊಟೋ ಪ್ರಕರಣ ದಾಖಲಿಸಿದ್ದಾರೆ..