LATEST NEWS
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಮಹಿಳೆ ಸಾವು
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಮಹಿಳೆ ಸಾವು
ಮಂಗಳೂರು ಎಪ್ರಿಲ್ 19: ಉಸಿರಾಟದ ತೊಂದರೆಯಿಂದ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಇಂದು ಮೃತಪಟ್ಟಿರುವ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 45 ವರ್ಷ ವಯಸ್ಸಿನ ಮಹಿಳೆ ಉಸಿರಾಟದ ತೊಂದರೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಉಸಿರಾಟದ ತೊಂದರೆ ಹಿನ್ನಲೆ ಅವರನ್ನು ನಿನ್ನೆ ವೆನ್ಲಾಕ್ ನಲ್ಲಿರುವ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಶಂಕಿತ ಕೊರೊನಾ ರೋಗದ ಲಕ್ಷಣಗಳ ಹಿನ್ನಲೆ ನಿನ್ನೆಯೇ ಮಹಿಳೆಯ ಗಂಟಲು ದ್ರವವನ್ನು ಕೋವಿಡ್ 19 ಪರೀಕ್ಷೆಗೆ ಕಳುಹಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ಉಸಿರಾಟದ ತೊಂದರೆ ವಿಷಮ ಸ್ಥಿತಿಗೆ ತಲುಪಿದ ಹಿನ್ನಲೆ ಮಹಿಳೆ ಸಾವನಪ್ಪಿದ್ದಾರೆ. ಕೊವಿಡ್ 19 ಪರೀಕ್ಷೆಯ ವರದಿ ಇನ್ನಷ್ಟೆ ಬರಬೇಕಾಗಿದ್ದು, ಸ್ಯಾಂಪಲ್ ಟೆಸ್ಟ್ ವರದಿ ಬಂದ ಬಳಿಕ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.