Connect with us

    LATEST NEWS

    ಶೋಷಿತರ ದನಿಯಾದ ಅಂಬಿಗರ ಚೌಡಯ್ಯ- ಸಚಿವ ಪ್ರಮೋದ್

    ಶೋಷಿತರ ದನಿಯಾದ ಅಂಬಿಗರ ಚೌಡಯ್ಯ- ಸಚಿವ ಪ್ರಮೋದ್

    ಉಡುಪಿ ಜನವರಿ 21: ಮೇಲ್ವರ್ಗದವರಿಂದ ಶೋಷಣೆಗೊಳಗಾದ ಶೋಷಿತರ ಪರವಾಗಿ ದನಿಯೆತ್ತಿದವರು ಅಂಬಿಗರ ಚೌಡಯ್ಯ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.

    ಅವರು ಭಾನುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಂಯುಕ್ತ ಆಶ್ರಯದಲ್ಲಿ, ಬನ್ನಂಜೆಯ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯದಲ್ಲಿ ಆಯೋಜಿದ್ದ , ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.

    ಬಸವಣ್ಣ ಮತ್ತು ಅಂಬಿಗರ ಚೌಡಯ್ಯ ಸಮಕಾಲೀನರಾಗಿದ್ದು, ಮೇಲ್ವರ್ಗದಲ್ಲಿ ಜನಿಸಿದ ಬಸವಣ್ಣ ಅವರು ತಮ್ಮ ವರ್ಗದವರಿಂದಲೇ ನಡೆಯುತ್ತಿದ್ದ ಶೋಷಣೆಯ ವಿರುದ್ದ ಸಿಡಿದೆದ್ದರೆ, ಶೋಷಿತ ಜನಾಂಗದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ಅವರು ಮೇಲ್ವರ್ಗದ ಶೋಷಣೆ ವಿರುದ್ದ ದನಿಯೆತ್ತಿದವರು, ಅರಿವು ಹೊಂದಿದರೆ ಶೋಷಣೆಗೆ ಒಳಗಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಚೌಡಯ್ಯ ಅವರು , ಮೌಡ್ಯತೆಯ ವಿರುದ್ದ ಅತ್ಯಂತ ತೀಕ್ಷ್ಣ ವಚನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸುತ್ತಿದ್ದರು ಎಂದು ಸಚಿವರು ಹೇಳಿದರು.

    ಅಂಬಿಗರ ಚೌಡಯ್ಯ ಅವರ ಕುರಿತು ತಮ್ಮ ಜೀವನದಲ್ಲಿ ನಡೆದ ಘಟನೆ ವಿವರಿಸಿದ ಸಚಿವರು, ಸರಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಬೇಕಿದ್ದ ತಮ್ಮ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದು, ಈ ಕುರಿತು ಮುಖ್ಯಮಂತ್ರಿಯವರನ್ನು ಕೇಳಿದಾಗ ಮುಂದೆ ನೋಡೋಣ ಎಂದು ಹೇಳಿದ್ದರು, ಆದರೆ ಮತ್ತೆ ಇದು ಪ್ರಸ್ತಾಪ ಆಗಲೇ ಇಲ್ಲ, ಈ ಮಧ್ಯೆ ನಾನು ರಾಣೆಬೆನ್ನೂರು ಸಮೀಪದ ಚೌಡದಾನಪುರದಲ್ಲಿರುವ , ಅಂಬಿಗರ ಚೌಡಯ್ಯ ಅವರ ಗದ್ದುಗೆಗೆ ಭೇಟಿ ನೀಡಿದೆ, ಭೇಟಿ ನೀಡುವ ಸಮಯದಲ್ಲಿ ನನ್ನಲ್ಲಿ ಏನೋ ಒಂದು ರೀತಿಯ ಕಂಪನ ಉಂಟಾಗುತ್ತಿದ್ದು, ಗದ್ದುಗೆ ಭೇಟಿ ನೀಡಿದ ಮರು ದಿನವೇ ಆಶ್ಚರ್ಯಕರ ರೀತಿಯಲ್ಲಿ ತಮ್ಮ ನಿರ್ಧಾರ ಬದಲಿಸಿದ ಮುಖ್ಯಮಂತ್ರಿಗಳು ಅದೇ ದಿನ ಸಂಜೆ , ನಾನು ಸಂಸದೀಯ ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅಗತ್ಯ ಸಿದ್ದತೆ ಮಾಡುವಂತೆ ತಮ್ಮ ಕಾರ್ಯದರ್ಶಿಗಳು ಸೂಚಿಸಿದರು, ಇದರಂದ ಚೌಡಯ್ಯ ಅವರು ವಚನಕಾರ ಮತ್ತು ಗುರು ಮಾತ್ರವಲ್ಲದೇ, ದೈವಿಕ ಶಕ್ತಿ ಉಳ್ಳವರು ಎಂದೂ ಸಹ ಸಾಬೀತಾಯಿತು ಎಂದು ಸಚಿವರು ಹೇಳಿದರು.

    ಚೌಡಯ್ಯ ಅವರ ಮಾರ್ಗದರ್ಶನ ಹಾದಿಯಲ್ಲೇ ನಡೆಯುವ ಉದ್ದೇಶದಿಂದ, ಸರಕಾರ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಪ್ರಾರಂಭಿಸಿದ್ದು, ಈ ನಿಗಮ ಮೂಲಕ ಮೀನುಗಾರರ ಅಭಿವೃದ್ದಿಗೆ ನೆರವು ನೀಡಲಾಗುತ್ತಿದೆ, ಅಂಬಿಗರ ಚೌಡಯ್ಯ ಅವರ ಆದರ್ಶ ಹಾಗೂ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.

    ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಉಡುಪಿ ಸರಕಾರಿ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಸುಮಾ ಎಸ್ ಮಾತನಾಡಿ, ಅಂಬಿಗರ ಜನಾಂಗದಲ್ಲಿ ಜನಿಸಿದ ಚೌಡಯ್ಯ ಅವರು ಬಸವಣ್ಣನ ಸಮಕಾಲೀನರಾಗಿದ್ದು, 180 ರಿಂದ 300 ವಚನಗಳನ್ನು ರಚಿಸಿದ್ದಾರೆ, ತಮ್ಮ ವಚನಗಳಲ್ಲಿ ಜಾತಿ ವ್ಯವಸ್ಥೆ, ಮೌಡ್ಯತೆ ವಿರುದ್ದ ದನಿಯೆತ್ತಿದ್ದಾರೆ, ಅನ್ಯಾಯ ಶೋಷಣೇಯ ವರಿದ್ದ ತಮ್ಮ ವಚನಗಳಲ್ಲಿ ಅತ್ಯಂತ ತೀಕ್ಷ್ಣ ಬಂಡಾಯ ಭಾಷೆ ಬಳಸಿರುವ ಇವರು ದಿಟ್ಟ ಅಂಬಿಗರ ಚೌಡಯ್ಯ ಎಂದು ಹೆಸರಾದವರು.

    ದೈನಂದಿನ ಬದುಕಿನಲ್ಲಿ ಆದ್ಯಾತ್ಮಿಕ ಆಚರಣೆ ಬಗ್ಗೆ, ಲಿಂಗ ಸಮಾನತೆ ಬಗ್ಗೆ ಹಾಗೂ ಅರಿವು ಮೂಡಿಸುವ ಬಗ್ಗೆ ವಚನ ರಚಿಸಿರುವ ಚೌಡಯ್ಯ ಅವರು, ಪ್ರತಿಯೊಬ್ಬರೂ ತನ್ನನ್ನು ತಾನು ಅರಿತರೇ ಆತ್ಮಜ್ಞಾನ ಮತ್ತು ದೈವತ್ವ ಕಾಣಲು ಸಾದ್ಯ ಎಂದು ತಿಳಿಸಿದ್ದು, ಪ್ರಸ್ತುತ ಸಮಾಜದ ತಲ್ಲಣಗಳಿಗೆ ಇವರ ವಚನಗಳು ಉತ್ತರ ನೀಡಲಿದ್ದು, ಈ ವಚನಗಳನ್ನು ಅರ್ಥ ಮಾಡಿಕೊಂಡು , ಅದೇ ದಾರಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *