LATEST NEWS
ಹೈದರಾಬಾದ್ ಮಾರ್ಗ ಮಧ್ಯೆ ತೀವ್ರ ಬೆನ್ನು ನೋವು,ಸಂಚಾರ ಮೊಟಕು :ಮಠಕ್ಕೆ ವಾಪಸ್ಸಾದ ಪೇಜಾವರ ಶ್ರೀ
ಹೈದರಾಬಾದ್ ಮಾರ್ಗ ಮಧ್ಯೆ ತೀವ್ರ ಬೆನ್ನು ನೋವು,ಸಂಚಾರ ಮೊಟಕು :ಮಠಕ್ಕೆ ವಾಪಸ್ಸಾದ ಪೇಜಾವರ ಶ್ರೀ
ಉಡುಪಿ, ಜನವರಿ 20 :ಮಂತ್ರಾಲಯದಿಂದ ಹೈದರಾಬಾದಿಗೆ ತೆರಳುತ್ತಿದ್ಡ ಉಡುಪಿ ಪೇಜಾವರ ಶ್ರೀಗಳಿಗೆ ದಾರಿ ಮಧ್ಯೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ.
ಪರಿಣಾಮ ಪೇಜಾವರ ಶ್ರೀಗಳು ಉಡುಪಿ ಮಠಕ್ಕೆ ವಾಪಸ್ಸಾಗಿದ್ದಾರೆ.
ಜನವರಿ 17 ರಂದು ಪರ್ಯಾಯ ಮಹೋತ್ಸವ ಪೂರೈಸಿದ್ದ ಪೇಜಾವರ ಶ್ರೀ ಗಳು ಎರಡು ವರ್ಷಗಳ ಪರ್ಯಾಯದ ನಂತರವೂ ದಣಿವರಿಯದೆ ನಿರಂತರ ಸಂಚಾರದಲ್ಲಿ ತೊಡಗಿದ್ದರು,
ಸೋಂದೆ, ಗದಗ, ಮಂತ್ರಾಲಯಕ್ಕೆ ತೆರಳಿದ್ದ ಸ್ವಾಮೀಜಿಗೆ ಮಂತ್ರಾಲಯದಿಂದ ಹೈದರಾಬಾದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕರ್ನೂಲ್ ಸಮೀಪ ಕಾರು ಚಾಲಕ ಹಠತ್ ಬ್ರೇಕ್ ಹಾಕಿದ ಪರಿಣಾಮ ಸ್ವಾಮೀಜಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ.
ಆದ್ದರಿಂದ ತಮ್ಮ ರಸ್ತೆ ಪ್ರಯಾಣವನ್ನು ಮೊಟಕುಗೊಳಿಸಿದ ಸ್ವಾಮೀಜಿ ಅವರು ವಿಮಾನದ ಮೂಲಕ ಉಡುಪಿ ಮಠಕ್ಕೆ ವಾಪಸ್ ಆಗಿದ್ದಾರೆ.
ದೇಹಾರೋಗ್ಯವನ್ನು ತಪಾಸಣೆ ನಡೆಸಿದ ವೈದ್ಯರು ಪೇಜಾವರ ಶ್ರೀಗಳಿಗೆ ಸಂಚಾರ ಮಾಡದಂತೆ ಹಾಗೂ ಒಂದು ವಾರದ ವಿಶ್ರಾಂತಿ ಪಡೆಯಲು ಸಲಹೆ ಮಾಡಿದ್ದಾರೆ.
You must be logged in to post a comment Login