LATEST NEWS
ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನಲೆ ಈ ಬಾರಿಯ ಆಳ್ವಾಸ್ ನುಡಿಸಿರಿ ರದ್ದು

ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನಲೆ ಈ ಬಾರಿಯ ಆಳ್ವಾಸ್ ನುಡಿಸಿರಿ ರದ್ದು
ಮಂಗಳೂರು ಅಗಸ್ಟ್ 28: ರಾಜ್ಯದಲ್ಲಿ ಭೀಕರ ಪ್ರವಾಹದ ಹಿನ್ನಲೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮವನ್ನು ಈ ಬಾರಿ ನಡೆಸದಿರಲು ಆಳ್ವಾಸ್ ಪ್ರತಿಷ್ಠಾನ ನಿರ್ಧರಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವಾ ಪ್ರತಿವರ್ಷ ಮೂಡುಬಿದಿರೆಯಲ್ಲಿ ವರ್ಣರಂಜಿತವಾಗಿ ಆಳ್ವಾಸ್ ನುಡಿಸಿರಿ, ವಿರಾಸತ್ ನಡೆಯುತ್ತಿತ್ತು.

ಆದರೆ ಈ ಬಾರಿ ರಾಜ್ಯದಲ್ಲಿ ನೆರೆ ಉಂಟಾದ ಹಿನ್ನೆಲೆ ಈ ವರ್ಷ ನುಡಿಸಿರಿ ನಡೆಸುವುದು ಬೇಡ ಎಂದು ನಿರ್ಧರಿಸಲಾಗಿದ್ದು , ಮುಂದಿನ ವರ್ಷ ಆಳ್ವಾಸ್ ನುಡಿಸಿರಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ನವೆಂಬರ್ ತಿಂಗಳಿನಲ್ಲಿ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ನಡೆಯಬೇಕಾಗಿತ್ತು. ನವೆಂಬರ್ 14ರಿಂದ 17ರ ವರೆಗೆ ನಡೆಯಬೇಕಿದ್ದ ಆಳ್ವಾಸ್ ವಿರಾಸತ್ ನುಡಿಸಿರಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಸಾಹಿತ್ಯ ಪ್ರೇಮಿಗಳು ಆಗಮಿಸುತ್ತಿದ್ದರು. ಪ್ರವಾಹದಿಂದ ತತ್ತರಿಸಿರುವಾಗ ಸಂಭ್ರಮ ಆಚರಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು. ವಿರಾಸತ್-ನುಡಿಸಿರಿ ಕಾರ್ಯಕ್ರಮವನ್ನ ಮುಂದಿನ ವರ್ಷ ಆಚರಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವಾ ಹೇಳಿದ್ದಾರೆ.