Connect with us

LATEST NEWS

ಮಂಗಳೂರಿಗೆ ಪ್ರಥಮ ಬಾರಿ ಭೇಟಿ ನೀಡಲಿರುವ ಟಿಬೆಟಿಯನ್ ಧರ್ಮಗುರು ದಲಾಯಿಲಾಮ

ಮಂಗಳೂರಿಗೆ ಪ್ರಥಮ ಬಾರಿ ಭೇಟಿ ನೀಡಲಿರುವ ಟಿಬೆಟಿಯನ್ ಧರ್ಮಗುರು ದಲಾಯಿಲಾಮ

ಮಂಗಳೂರು ಅಗಸ್ಟ್ 28: ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಅವರು ನಾಳೆ ಅಗಸ್ಟ್ 29 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಖಿಲ ಭಾರತ ಕ್ಯಾಥೋಲಿಕ್​ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಲಿದ್ದಾರೆ. ಇದು ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಅವರು ಮಂಗಳೂರು ನಗರಕ್ಕೆ ಪ್ರಥಮ ಭೇಟಿಯಾಗಿದೆ.

ಟಿಬೆಟಿಯನ್ ಧರ್ಮಗುರು ದಲಾಯಿಲಾಮ ಅವರು ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಹಾಗೂ ಭದ್ರತೆಯ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ದಲಾಯಿಲಾಮರಿಗೆ ಉಳಿದುಕೊಳ್ಳಲು ಬೇಕಾಗಿರೋ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಹಳ ಸಂಖ್ಯೆಯಲ್ಲಿ ಟಿಬೆಟಿಯನ್ ವಿಧ್ಯಾರ್ಥಿಗಳಿರುವ ಹಿನ್ನಲೆಯಲ್ಲಿ 30 ರಂದು ಧರ್ಮಗುರು ದಲಾಯಿಲಾಮರು ಮಂಗಳೂರಿನಲ್ಲಿರುವ ಟಿಬೆಟಿಯನ್ಸ್ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಲಾಯಿಲಾಮರಿಗೆ ಅಗತ್ಯವಿರುವ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಶಿಷ್ಟಾಚಾರ ಪ್ರಕಾರ ಮಾಡಲಾಗಿದೆ. ಆಗಸ್ಟ್ 31ರಂದು ಟಿಬೆಟಿಯನ್ ಬೌದ್ಧ ಧರ್ಮಗುರು ನಿರ್ಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸಂಥಿಲ್ ತಿಳಿಸಿದ್ದಾರೆ.

Facebook Comments

comments