LATEST NEWS
15ನೇ ಆಳ್ವಾಸ್ ನುಡಿಸಿರಿ ನವೆಂಬರ್ 16 ರಿಂದ ಪ್ರಾರಂಭ

15ನೇ ಆಳ್ವಾಸ್ ನುಡಿಸಿರಿ ನವೆಂಬರ್ 16 ರಿಂದ ಪ್ರಾರಂಭ
ಮಂಗಳೂರು ಅಗಸ್ಟ್ 28: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 15ನೇ ವರ್ಷದ ಸಮ್ಮೇಳನ ನವೆಂಬರ್ 16, 17 ಮತ್ತು 18ರಂದು ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 16 ರಂದು ಬೆಳಗ್ಗೆ ಉದ್ಘಾಟನೆಗೊಳ್ಳುವ ಸಮ್ಮೇಳನ 18ರಂದು ಮಧ್ಯಾಹ್ನ ಸಂಪನ್ನಗೊಳ್ಳಲಿದೆ. ಸಮ್ಮೇಳನದ ರೂಪರೇಷೆ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರ ಅಂತಿಮ ರೂಪ ನೀಡಲಾಗುವುದು. ಎಂದಿನಂತೆ ಈ ವರ್ಷವೂ ರತ್ನಾಕರವರ್ಣಿ ವೇದಿಕೆ ನುಡಿಸಿರಿ ಸಭಾಂಗಣದಲ್ಲಿ ಸಮ್ಮೇಳನ ಜರುಗಲಿದೆ.

ಪ್ರತಿನಿಧಿಯಾಗ ಬಯಸುವ ಕನ್ನಡಾಭಿಮಾನಿಗಳು 100 ರೂಪಾಯಿ ಪ್ರತಿನಿಧಿ ಶುಲ್ಕ ನೀಡಿ ಸದಸ್ಯರಾಗಬಹುದು. ವಿದ್ಯಾರ್ಥಿಗಳಿಗೆ ಸಮ್ಮೇಳನಕ್ಕೆ ಉಚಿತ ಪ್ರವೇಶ ಸಮ್ಮೇಳನದ ಯಶಸ್ಸಿಗೆ ಸಿದ್ಧತೆ ನಡೆಯುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ 2018 ಅನ್ನು ಯಶಸ್ವಿಗೊಳಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.