Connect with us

DAKSHINA KANNADA

ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದರಸಗಳನ್ನು ಮುಚ್ಚಲು ನಿರ್ಧಾರ….

ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದರಸಗಳನ್ನು ಮುಚ್ಚಲು ನಿರ್ಧಾರ….

ದಿಸ್ಪುರ್ , ಅಕ್ಟೋಬರ್ 14: ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದರಸಗಳನ್ನು ಮುಚ್ಚಲು ಅಸ್ಸಾಂ ಸರಕಾರ ನಿರ್ಧರಿಸಿದೆ.

ಸರಕಾರದ ಹಣದಲ್ಲಿ ಕುರಾನ್ ಕಲಿಸುವುದು ಸಾಧ್ಯವಿಲ್ಲ, ಒಂದು ವೇಳೆ ಕುರಾನ್ ಕಲಿಸಬೇಕಾದಲ್ಲಿ, ಅದರ ಜೊತೆಗೆ ಭಗವದ್ಗೀತೆ ಮತ್ತು ಬೈಬಲ್ ಕೂಡಾ ಕಲಿಸಬೇಕಾಗುತ್ತದೆ ಎಂದು ಅಸ್ಸಾಂ ನ ಸಚಿವ ಹಿಮಂತ ಬಿಸ್ವಾ ಸರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂ ಸರಕಾರ ಈಗಾಗಲೇ ಈ ಕುರಿತು ನವಂಬರ್ ನಲ್ಲೇ ಆದೇಶ ಜಾರಿ ಮಾಡಿದೆ. ಸರಕಾರಿ ಸ್ವಾಮ್ಯದ ಎಲ್ಲಾ ಮದರಗಳನ್ನು ತಕ್ಷಣವೇ ಮುಚ್ಚಲಾಗುವುದು.

ಹಾಗೂ ಇಂಥ ಶಾಲೆಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಬದಲಾಯಿಸಲಾಗುವುದು. ಈ ಶಾಲೆಗಳಲ್ಲಿರುವ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸರಕಾರಿ ಹಣದಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುವುದು ತಪ್ಪು.

ಈ ಕಾರಣಕ್ಕಾಗಿ ಅಸ್ಲಾಂ ಸರಕಾರ ಈ ರೀತಿಯ ನಿರ್ಧಾರಕ್ಕೆ ಬಂದಿದ್ದು, ಶಿಕ್ಷಣದಲ್ಲಿ ಏಕರೂಪತೆಯನ್ನು ತರುವುದು ಸರಕಾರದ ಉದ್ಧೇಶ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಸಾಕಷ್ಟು ಇಂಥಹ ಧಾರ್ಮಿಕ ಶಿಕ್ಷಣವನ್ನು ನೀಡುವ ಮದಸರಗಳಿದ್ದು, ಸರಕಾರವೇ ಈ ಶಾಲೆಗಳನ್ನು ನಡೆಸುತ್ತಿದೆ.

ಅಸ್ಲಾಂ ಸರಕಾರದ ಈ ನಿರ್ಧಾರ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಅನ್ವಯವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.