Connect with us

LATEST NEWS

ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ವೀಡಿಯೋ ವೈರಲ್

ಲಕ್ನೋ: ಬಾಬಾ ರಾಮ್‍ದೇವ್ ಯೋಗ ಮಾಡೋದು ಸಾಮಾನ್ಯ, ಆದ್ರೆ ಈ ಬಾರಿ ಆನೆ ಮೇಲೆ ಯೋಗ ಮಾಡಿ ಸುದ್ದಿಯಾಗಿದ್ದಾರೆ. ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲಿಂದ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.