Connect with us

    LATEST NEWS

    ಸ್ಟ್ರಾಂಗ್ ರೂಂ ಸೇರಿದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ

    ಸ್ಟ್ರಾಂಗ್ ರೂಂ ಸೇರಿದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ

    ಮಂಗಳೂರು, ಏಪ್ರಿಲ್ 19 : ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮತಯಂತ್ರಗಳು ಸುರತ್ಕಲ್‍ನ ಎನ್ ಐ ಟಿಕೆಯ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಭದ್ರವಾಗಿವೆ.

    ಇಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಚುನಾವಣಾ ವೀಕ್ಷಕರಾದ ರಾಜೀವ್ ರತನ್ ಅವರ ಸಮ್ಮುಖದಲ್ಲಿ ಎಲ್ ಮತಯಂತ್ರಗಳನ್ನು ಭದ್ರತಾಕೊಠಡಿಯಲ್ಲಿರಿಸಿ ಮುದ್ರೆ ಹಾಕಲಾಯಿತು.

    8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಅತ್ಯಂತ ಭದ್ರತೆಯಲ್ಲಿ ತಂದಿರಿಸಲಾಗಿದ್ದು, ಕಟ್ಟಡಕ್ಕೆ ವಿಶೇಷ ಭದ್ರತಾ ಪಡೆ, ಪೊಲೀಸ್ ತಂಡ ಹಾಗೂ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.

    ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗೆ ಇರಿಸಿದ ಬಳಿಕ ಜಿಲ್ಲಾಧಿಕಾರಿಗಳು ಎಲ್ಲರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು. ಸಿಇಒ ಡಾ.ಸೆಲ್ಲಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಇದ್ದರು.

    ಇದೇ ಸಂದರ್ಭದಲ್ಲಿ ಮತಯಂತ್ರಗಳ ಪರಿಶೀಲನೆಯನ್ನು ಎನ್‍ಐಟಿಕೆಯಲ್ಲಿಂದು ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ರಾಜಕೀಯ ಪಕ್ಷದ ಪ್ರತಿನಿಧಿಗಳು ಪಾಲ್ಗೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply