LATEST NEWS
ಉಡುಪಿಯಲ್ಲಿ ಮದ್ಯವ್ಯಸನಿಗಳ ಪಾಡು ಹೇಳ ತೀರದು……..!!
ಉಡುಪಿಯಲ್ಲಿ ಮದ್ಯವ್ಯಸನಿಗಳ ಪಾಡು ಹೇಳ ತೀರದು……..!!
ಉಡುಪಿ ಎಪ್ರಿಲ್ 3: ಕೊರೊನಾ ಮುಂಜಾಗೃತಾ ಕ್ರಮವಾಗಿ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಇದೇ ಈಗ ಮದ್ಯವ್ಯಸನಿಗಳ ಪಾಲಿಗೆ ಕರಾಳವಾಗಿ ಮಾರ್ಪಟ್ಟಿದೆ. ಈಗಾಗಲೇ ಮದ್ಯಪಾನ ಇಲ್ಲದೆ ಮಾನಸಿಕ ಖಿನ್ನತೆ ಒಳಗಾಗಿ ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಲ್ಲದೆ ಮದ್ಯವ್ಯಸನಿಗಳು ಮದ್ಯಸಿಗದೆ ಮಾನಸಿಕ ಖಿನ್ನತೆಗೆ ಒಳಪಟ್ಟು ನಗರದಲ್ಲಿ ಮಾನಸಿಕ ಅಸ್ವಸ್ಥರಾಗಿ ಅಲೆದಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಚಿತ್ಪಾಡಿ- ಹನುಮಾನ್ ಗ್ಯಾರೇಜ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ವಶಕ್ಕೆ ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಶುಕ್ರವಾರ ನಡೆದಿದೆ. ಯುವಕನು ಮದ್ಯವ್ಯಸನಿಯಾಗಿದ್ದು ಕೆಲವು ದಿನಗಳಿಂದ ಮದ್ಯವು ಲಭ್ಯವಾಗದೆ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದಾನೆಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಜನ ಇದ್ದರೂ ಕೊರೊನಾ ರೋಗದ ಸೋಂಕು ತಗಲುತ್ತದೆ ಎಂಬ ಭೀತಿಯಿಂದ ಯಾರೊಬ್ಬರಿಂದಲೂ ಯುವಕನ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಗಳು ನಡೆದಿಲ್ಲ. ಸಹಕರಿಸಲೂ ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ ರಾಜೇಶ ಕಾಪು, ಜಗನ್ನಾಥ್ ಶೆಟ್ಟಿ ಅವರು ರೋಗಿಯನ್ನು ಆಸ್ಪತ್ರೆ ಸಾಗಿಸಲು ಸಹಕರಿಸಿದ್ದಾರೆ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಹೇಳಿಕೊಂಡಿದ್ದಾರೆ.