LATEST NEWS
ಆಳ್ವಾಸ್ ವಿರಾಸತ್ 2023 ಪ್ರಶಸ್ತಿಗೆ ವಿಜಯ ಪ್ರಕಾಶ್ ,ಪ್ರವೀಣ್ ಗೋಡ್ಖಿಂಡಿ, ಮೈಸೂರು ಮಂಜುನಾಥ್ ಆಯ್ಕೆ

ಮಂಗಳೂರು ಡಿಸೆಂಬರ್ 10 : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡುವ ‘ಆಳ್ವಾಸ್ ವಿರಾಸತ್ 2023’ ಪ್ರಶಸ್ತಿಗೆ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್, ವಯೋಲಿನ್ ವಾದಕ ಮೈಸೂರು ಮಂಜುನಾಥ್, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆಯಲ್ಲಿ ಇದೇ 14ರಿಂದ 17ರವರೆಗೆ ಆಳ್ವಾಸ್ ವಿರಾಸತ್ 2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ಇದೇ 17ರಂದು ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಇದೇ 14ರಂದು ಸಂಜೆ 5.30ಕ್ಕೆ ವಿರಾಸತ್‌ಗೆ ಚಾಲನೆ ನೀಡಲಿದ್ದಾರೆ. ಅಂದು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, 100ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 3000ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ. ಅದೇ ದಿನ ನಡೆಯುವ ಸಾಂಸ್ಕೃತಿಕ ರಥ ಮತ್ತು ರಥಾರತಿ ಈ ಸಲದ ವಿರಾಸತ್‌ನ ವೈಶಿಷ್ಟ್ಯ. ಕಾಶಿಯಲ್ಲಿ ಗಂಗಾರತಿ ನಡೆಸುವ ತಂಡವೇ ಇಲ್ಲಿ ರಥಾರತಿಯನ್ನು ನೆರವೇರಿಸಲಿದೆ’ ಎಂದರು.