Connect with us

    FILM

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಮಾತೃವಿಯೋಗ

    ಮುಂಬೈ: ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಇಂದು ಅನಾರೋಗ್ಯದಿಂದ ಮಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಮುಂಬೈನ ಹಿರಾನಂದನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


    ತಾಯಿ ನಿಧನಕ್ಕೆ ಟ್ವಿಟರ್​ನಲ್ಲಿ ತಮ್ಮ ದುಃಖ ವ್ಯಕ್ತಪಡಿಸಿರುವ ಅಕ್ಷಯ್ ಕುಮಾರ್ ‘ಅವಳು ನನ್ನ ಮೂಲ. ನಾನು ತುಂಬಾ ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಇಂದು ಬೆಳಗ್ಗೆ ಜಗತ್ತನ್ನು ತೊರೆದಿದ್ದಾರೆ. ನನ್ನ ತಂದೆಯೊಂದಿಗೆ ಬೇರೆ ಜಗತ್ತಿನಲ್ಲಿ ಜೊತೆಯಾಗಿದ್ದಾರೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ಮಂಗಳವಾರ ಸಂಜೆ ತನ್ನ ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಕ್ಕಾಗಿ ಹಿತೈಷಿಗಳಿಗೆ ಧನ್ಯವಾದ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು. ಇದಕ್ಕೂ ಮೊದಲು ಬ್ರಿಟನ್​​​ನಲ್ಲಿ ಸಿಂಡ್ರೆಲಾ ಚಿತ್ರದ ಶೂಟಿಂಗ್​​ ಅನ್ನು ಸ್ಥಗಿತಗೊಳಿಸಿ, ಭಾರತಕ್ಕೆ ಅಕ್ಷಯ್​ಕುಮಾರ್ ವಾಪಸ್​ ಆಗಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *