Connect with us

FILM

ಅಕ್ಷಯ್ ಕುಮಾರ್ ಆನೆ ಲದ್ದಿ ಟೀ, ಗೋಮೂತ್ರ ಸೇವನೆಯ ರಹಸ್ಯವನ್ನೂ ಬಿಚ್ಚಿಟ್ರು!

ಮುಂಬೈ: ಬಾಲಿವುಡ್ ಚಿತ್ರನಟ ಅಕ್ಷಯ್ ಕುಮಾರ್ ಒಂದಿಲ್ಲೊಂದು ಹೊಸ ವಿಷಯಕ್ಕೆ ಸುದ್ದಿಯಾಗ್ತಾರೆ , ಈ ಬಾರಿ ಆನೆ ಲದ್ದಿ ಟೀ ಸೇವಿಸ್ತಾ ಇದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ​ ಇನ್​ಸ್ಟಾಗ್ರಾಂ ಚಾಟ್​ ಮೂಲಕ ಬೇರ್​ ಗ್ರಿಲ್​ ಜತೆಗೆ ಹಂಚಿಕೊಂಡಿದ್ದಾರೆ. ದ ವೈಲ್ಡ್​ ವಿತ್​ ಬೇರ್ ಗ್ರಿಲ್ಸ್​ ಕಾರ್ಯಕ್ರಮಕ್ಕೆ ಸಂಬಂಧಿಸಿ ಬೇರ್ ಗ್ರಿಲ್ಸ್ ಮತ್ತು ಹುಮಾ ಖುರೇಶಿ ಜತೆಗೆ ಇನ್​ಸ್ಟಾಗ್ರಾಂ ಚಾಟ್ ಮಾಡಿದ್ದ ಅಕ್ಷಯ್ ಕುಮಾರ್​ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ದ ವೈಲ್ಡ್ ವಿತ್​ ಬೇರ್ ಗ್ರಿಲ್ಸ್​ ಕಾರ್ಯಕ್ರಮದಲ್ಲಿ ಕೆಲವು ಡೇರ್ ಡೆವಿಲ್ ಸ್ಟಂಟ್ ಮಾಡಿ ತೋರಿಸುವ ಅಕ್ಷಯ್ ಕುಮಾರ್​, ಆನೆ ಲದ್ದಿ ಟೀ ಕುಡಿಯುತ್ತಿರುವ ದೃಶ್ಯವಿದೆ. ಹುಮಾ ಖುರೇಶಿ ಮತ್ತು ಅನೇಕರು ಇದನ್ನು ನೋಡಿ ಹುಬ್ಬೇರಿಸಿದ್ದಾರೆ. ಆನೆ ಲದ್ದಿ ಟೀ ಕುಡಿಯೋಕಾಗತ್ತಾ ಅನ್ನೋ ಪ್ರಶ್ನೆಯನ್ನು ಇನ್​ಸ್ಟಾಗ್ರಾಂ ಚಾಟ್​ ಸಂದರ್ಭದಲ್ಲಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, ಆಯುರ್ವೇದ ಕಾರಣಕ್ಕಾಗಿ ನಿತ್ಯವೂ ನಾನು ಗೋಮೂತ್ರ ಸೇವಿಸುತ್ತಿದ್ದೇನೆ. ಹಾಗಾಗಿ ಆನೆ ಲದ್ದಿ ಟೀ ಕುಡಿಯೋದೇನೂ ಕಷ್ಟವಲ್ಲ ಎಂದು ಹೇಳಿ ಗಮನಸೆಳೆದಿದ್ದಾರೆ.

ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್​ ಕಾರ್ಯಕ್ರಮವು ಡಿಸ್ಕವರಿ ಪ್ಲಸ್ ಆ್ಯಪ್​ನಲ್ಲಿ ಸೆಪ್ಟೆಂಬರ್ 11 ರಂದು ಮತ್ತು ಡಿಸ್ಕವರಿ ಚಾನೆಲ್​ನಲ್ಲಿ ಸೆಪ್ಟೆಂಬರ್​ 14 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Facebook Comments

comments