UDUPI
ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಣೆ
ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಣೆ
ಉಡುಪಿ ಸೆಪ್ಟೆಂಬರ್ 30:ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಿಸಲಾಯಿತು. ಉಡುಪಿಯ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ದನ ಹಾಗೂ ಮಹಾಕಾಳಿ ದೇವಾಲಯ ಒಳಾಂಗಣದಲ್ಲಿರುವ ಮಹಾಕಾಳಿ ದೇವಳದ ಮುಂಭಾಗ ಪುಟಾಣಿ ಮಕ್ಕಳಿಗಾಗಿ ಅಕ್ಷರಾಭ್ಯಾಸ ನಡೆಯಿತು.
ವಿಜಯ ದಶಮಿಯಾದ ಇಂದು ಶಾಲೆಗೆ ಹೋಗುವ ಮುನ್ನ ಕಾಳಿ ಮಾತೆ ಮುಂಭಾಗ ಅಕ್ಷರಾಭ್ಯಾಸ ಕಲಿತರೆ ಸರಸ್ವತಿ ಅಂತಹ ಮಕ್ಕಳ ಕೈ ಹಿಡಿಯುವಳು ಅನ್ನೋ ನಂಬಿಕೆ ಭಕ್ತ ಸಮೂಹದಲ್ಲಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಸುಮಾರು ೨೦೦ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಬೆಳ್ತಿಗೆ ಅಕ್ಕಿ ಹಾಗೂ ಅರಿಶಿನದ ತುಂಡನ್ನು ಬಳಸಿಕೊಂಡು ಅಕ್ಷರಾಭ್ಯಾಸ ನಡೆಸಲಾಯಿತು.
ಬಟ್ಟಲಿನಲ್ಲಿ ಅಕ್ಕಿಯನ್ನು ಹರಡಿ ಅದ್ರ ಮೇಲೆ ಕನ್ನಡ ಅಕ್ಷರಮಾಲೆ, ಸಂಸ್ಕೃತ ಶ್ಲೋಕಗಳನ್ನು ಬರೆಸಲಾಯಿತು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಅನ್ನೋ ನಾಣ್ಣುಡಿಯಿದೆ. ಆದ್ರೆ ಇಲ್ಲಿ ದೇಗುಲವೇ ಮೊದಲ ಪಾಠ ಶಾಲೆ ಅನ್ನೋದನ್ನು ಭಕ್ತಾದಿಗಳು ನಂಬಿಕೊಂಡು ಬಂದಿದ್ದಾರೆ.
ಈ ರೀತಿ ತಾಯಿ ಮಹಾಕಾಳಿ ಮುಂದೆ ಕೂತು ಅಕ್ಷರಾಭ್ಯಾಸ ನಡೆಸಿದ್ದಲ್ಲಿ ಅಂತಹ ಮಕ್ಕಳು ಉಜ್ವಲ ಭವಿಷ್ಯ ಪಡೆಯುತ್ತಾರೆ ಅನ್ನೋ ನಂಬಿಕೆಯಿದೆ.. ಈ ಕಾರಣಕ್ಕಾಗಿ ವಿಜಯದಶಮಿ ದಿವಸ ದೇಗುಲದ ಧರ್ಮದರ್ಶಿಗಳ ನೇತೃತ್ವದಲ್ಲಿ ನಡೆದ ಅಕ್ಷಾರಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ನೂರಾರು ತಾಯಂದಿರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು.