LATEST NEWS
ಸೂಪರ್ ಹಿಟ್ ಪ್ರಸಂಗಗಳ ಸೃಷ್ಟಿಕರ್ತ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇನ್ನಿಲ್ಲ
ಮಂಗಳೂರು ಅಗಸ್ಟ್ 15: ಹಿರಿಯ ಯಕ್ಷಗಾನ ಪ್ರಸಂಗಕರ್ತ ಅಭಿನವ ವಾಲ್ಮೀಕಿ ಎಂದು ಬಿರುದು ಪಡೆದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (67) ಶನಿವಾರ ತಡ ರಾತ್ರಿ ನಿಧನರಾದರು. ರಕ್ತ ಸಂಬಂಧಿತ ಮೈಲೋಡಿಸ್‌ಪ್ಲೇಸಿಯಾ ಎಂಬ ಕಾಯಿಲೆಯಿಂದಾಗಿ ಕೆಲವು ತಿಂಗಳಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
32ರಷ್ಟು ಯಕ್ಷಗಾನ ಕೃತಿಗಳನ್ನು ರಚಿಸಿರುವ ಅವರು, 30 ವರ್ಷಗಳಿಂದ ಕಟೀಲು ಮೇಳದಲ್ಲಿ ಹಾಗೂ ಇದಕ್ಕೂ ಮೊದಲು ಪುತ್ತೂರು, ಕರ್ನಾಟಕ ಮೇಳಗಳಲ್ಲಿ ವ್ಯವಸಾಯ ಮಾಡಿದ್ದ ಅವರು ವೇಷಧಾರಿಯಾಗಿಯೂ, ಮದ್ದಳೆವಾದಕರಾಗಿಯೂ ಕಲಾಸೇವೆ ಸಲ್ಲಿಸಿದ್ದಾರೆ.
ರಾಮಾಯಣದ ಕಥಾಭಾಗ ‘ಮಾ ನಿಷಾದ’ ಅಲ್ಲದೆ, ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ ಮೊದಲಾದ ಸೂಪರ್ ಹಿಟ್ ಪ್ರಸಂಗಗಳನ್ನು ರಚಿಸಿ, ಅಭಿನವ ವಾಲ್ಮೀಕಿ ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು.