Connect with us

DAKSHINA KANNADA

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರು ಚಾಲಕರ ಮುಂದುವರಿದ ಗೂಂಡಾಗಿರಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರು ಚಾಲಕರ ಮುಂದುವರಿದ ಗೂಂಡಾಗಿರಿ

ಮಂಗಳೂರು, ನವಂಬರ್ 08: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರು ಚಾಲಕರ ಅಟ್ಟಹಾಸ ಮಿತಿ ಮೀರುತ್ತಿದೆ.

ಇದಕ್ಕೆ ಸಾಕ್ಷಿಯೆಂಬಂತೆ ಎರಡು ದಿನಗಳ ಹಿಂದೆ ಸ್ಥಳೀಯ ಕಾರು ಚಾಲಕರು ಓಲಾ ಕಾರು ಚಾಲಕನಿಗೆ ಗಂಭೀರವಾಗಿ ಹಲ್ಲೆ ನಡೆಸುವ ಮೂಲಕ ಮತ್ತೆ ತಮ್ಮ ಕ್ರೌರ್ಯ ಮೆರೆದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಓಲಾ ಕಾರು ಚಾಲಕ ತನ್ನ ಪ್ರಯಾಣಿಕರನ್ನು ಡ್ರಾಪ್ ಮಾಡಿ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿದ್ದ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ಕಾರು ಚಾಲಕರು ಕಾರನ್ನು ಕೂಡಲೇ ತೆರವುಗೊಳಿಸಿ ಸ್ಥಳದಿಂದ ತೆರಳುವಂತೆ ಸೂಚನೆ ನೀಡಿದ್ದಾರೆ.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಓಲಾ ಚಾಲಕನಿಗೆ ಸ್ಥಳೀಯ ಕಾರು ಚಾಲಕರು ಮನ ಬಂದಂತೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ ಬಳಿಕದ ಬೆಳವಣಿಗೆಯಲ್ಲಿ ಸ್ಥಳೀಯ ಕಾರು ಚಾಲಕರು ತಮಗೂ ಓಲಾ ಚಾಲಕರು ಹಲ್ಲೆ ನಡೆಸಿದ್ದಾರೆ ಎನ್ನುವ ಸುಳ್ಳು ಘಟನೆಯನ್ನು ಸೃಷ್ಟಿಸಿ, ಸ್ಥಳಕ್ಕೆ ಸರಕಾರದ ಉಚಿತ ಅಂಬ್ಯುಲೆನ್ಸ್ ಕರೆಸಿ, ನೆಲದಲ್ಲಿ ಒತ್ತಾಯಪೂರ್ವಕವಾಗಿ ಮಲಗಿಸಿದ್ದ ಇಬ್ಬರು ಕಾರು ಚಾಲಕರನ್ನು ಅಂಬ್ಯುಲೆನ್ಸ್ ನಲ್ಲಿ ಮಲಗಿಸಿ ಆಸ್ಪತ್ರೆಗೆ ಕಳುಹಿಸುವ ನಾಟಕ ಮಾಡಿದ್ದಾರೆ

. ಅಲ್ಲದೆ ಇದರ ವಿಡಿಯೋ ವನ್ನೂ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಮೊಬೈಲ್ ಮಾಡುತ್ತಿರುವ ವ್ಯಕ್ತಿ ಅಂಬ್ಯುಲೆನ್ಸ್ ಚಾಲಕನಿಗೆ ಸೈರನ್ ಹಾಕಿ ಹೋಗುವಂತೆ ಆದೇಶವನ್ನೂ ಮಾಡುತ್ತಿರುವುದು ಕೇಳುತ್ತಿದೆ.

ವಿಮಾನ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಗಾಗಿಯೇ ಸ್ಥಳಾವಕಾಶವನ್ನು ಮಾಡಲಾಗಿದ್ದು, ಪಾರ್ಕಿಂಗ್ ಶುಲ್ಕ ನೀಡಿದ ವಾಹನಗಳು ಈ ಸ್ಥಳದಲ್ಲಿ ಪಾರ್ಕ್ ಮಾಡಬಹುದಾಗಿದೆ.

ಆದರೆ ಸ್ಥಳೀಯ ಕಾರು ಚಾಲಕರು ಓಲಾ ಕಾರುಗಳನ್ನು ಪಾರ್ಕ್ ಮಾಡಲು ಆಕ್ಷೇಪಿಸುವ ಅಧಿಕಾರವನ್ನು ನೀಡಿದವರು ಯಾರು ಎನ್ನುವ ಪ್ರಶ್ನೆಯೂ ಉದ್ಭವಿಸುತ್ತವೆ.

ದೇಶದಲ್ಲಿ ಒರ್ವ ವ್ಯಕ್ತಿಗೆ ಯಾವುದೇ ಕಾನೂನು ಮುರಿಯದೆ ತನಗೆ ಇಷ್ಟ ಬಂದಲ್ಲಿ ಹೋಗಬಹುದು, ಕೆಲಸ ಮಾಡಬಹುದು ಎನ್ನುವ ಸ್ವಾತಂತ್ರ್ಯವಿದ್ದು, ಇದನ್ನು ಆಕ್ಷೇಪಿಸುವುದೆಂದರೆ ಆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗಿದೆ.

ಪೋಲೀಸರು ಕೂಡಲೇ ಈ ಬಗ್ಗೆ ಗಮನಹರಿಸಿ ವಿಮಾನ ನಿಲ್ದಾಣದ ಕಾರು ಚಾಲಕರ ಮೇಲೆ ಕ್ರಮ ಜರುಗಿಸುವ ಅಗತ್ಯವಿದೆ.

ತಮಗೆ ತೋಚಿದ ಹಾಗೆ ಬಾಡಿಗೆ ವಸೂಲಿ ಮಾಡುವ ಈ ಕಾರು ಚಾಲಕರು , ಓಲಾದಂತಹ ಸೇವೆಗಳು ಕಡಿಮೆ ದರದಲ್ಲಿ ಸೇವೆ ನೀಡುವುದನ್ನು ತಡೆಯುತ್ತಿರುವುದರ ಬಗ್ಗೆ ಸಾರ್ವಜನಿಕರೂ ಧ್ವನಿ ಎತ್ತಬೇಕಿದೆ.

ವಿಡಿಯೋಗಾಗಿ…

ವಿಡಿಯೋ 2..

Share Information
Continue Reading
Advertisement
Click to comment

Leave a Reply

Your email address will not be published. Required fields are marked *