LATEST NEWS
ಜುಲೈ 22 ರಿಂದ ಮಂಗಳೂರಿನಿಂದ ಅಬುಧಾಬಿಗೆ ಪ್ರತಿದಿನ ಏರ್ ಇಂಡಿಯಾ ವಿಮಾನ
ಮಂಗಳೂರು, ಜುಲೈ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಗೆ ಪ್ರತಿದಿನ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜುಲೈ 22 ರಿಂದ ಪ್ರತಿ ದಿನ ವಿಮಾನ ಸಂಚಾರ ಆರಂಭಿಸಲಿದೆ.
ಜುಲೈ 22 ರಿಂದ ಫ್ಲೈಟ್ IX 819 ರ ಸಂಚಾರದೊಂದಿಗೆ ಪ್ರತಿ ದಿನ ವಿಮಾನ ಸೇವೆ ಪ್ರಾರಂಭವಾಗಲಿದೆ. ಇದು ರಾತ್ರಿ 8:15 ಕ್ಕೆ ಅಬುಧಾಬಿಗೆ ಹೊರಡಲಿದೆ. ಅಲ್ಲಿಂದ ಬರುವ ವಿಮಾನ IX 820 ಬೆಳಿಗ್ಗೆ 5:20 ಕ್ಕೆ ಮಂಗಳೂರಿಗೆ ಆಗಮಿಸುತ್ತದೆ.
ಈಗಾಗಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX) ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ವಾರದಲ್ಲಿ 4 ವಿಮಾನಗಳ ಸಂಚಾರ ನಿರ್ವಹಿಸುತ್ತಿದೆ. ಇದೀಗ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಹೊಸ ವಿಮಾನ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಅಲ್ಲದೆ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಪ್ರಾರಂಭಿಸುವ ಸೂಚನೆ ದೊರೆತ ಬೆನ್ನಲ್ಲೇ ಇದೀಗ ಇಂಡಿಗೋ ಕೂಡ ಮಂಗಳೂರಿನಿಂದ ಆಗಸ್ಟ್ 9 ರಿಂದ ಅಬುಧಾಬಿಗೆ ದೈನಂದಿನ ವಿಮಾನಯಾನ ಸೇವೆ ಒದಗಿಸುವುದಾಗಿ ಘೋಷಿಸಿದೆ. ಆ ಮೂಲಕ ಮೂಲಕ ಸ್ಪರ್ಧೆಯನ್ನು ಹೆಚ್ಚಿಸಲಿದೆ.