ತಿರುವನಂತಪುರಂ, ಮಾರ್ಚ್ 09: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್‌ ಇಂಡಿಯಾದ ಸಿಬ್ಬಂದಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬುಧವಾರ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೇರಳದ ವಯನಾಡ್‌ ಮೂಲದ ಶಫಿ ಬಂಧಿತ ಆರೋಪಿ. ಆತ ಬಹ್ರೇನ್‌-ಕೋಜಿಕೋಡ್‌-ಕೊಚ್ಚಿಯ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತ ಒಟ್ಟು 1487 ಗ್ರಾಂ ಚಿನ್ನವನ್ನು ತನ್ನ ಕೈಗಳಿಗೆ ಕಟ್ಟಿಕೊಂಡಿದ್ದ. ಪೂರ್ತಿ ತೋಳಿನ ಶರ್ಟ್‌ ಧರಿಸಿ, ಬಂಗಾರ ಕಾಣದಂತೆ ಮುಚ್ಚಿಟ್ಟುಕೊಳ್ಳಲಾಗಿತ್ತು.

https://youtube.com/shorts/U8E2aeiyFu0?feature=share

ಆತ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದಾಗಿ ಕೊಚ್ಚಿಯಲ್ಲಿ ಆತನನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಆಗ ಶಮಿ ಕೈಗಳಲ್ಲಿ ಚಿನ್ನ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Information