Connect with us

    LATEST NEWS

    ಎಲ್ಲಾ ಮಾದರಿಯ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ?

    ನವದೆಹಲಿ, ಡಿಸೆಂಬರ‌್ 30 : ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. ಅಪಘಾತ ಉಂಟಾದಾಗ ಪ್ರಯಾಣಿಕರ ಸುರಕ್ಷತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

    ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ, 2021ರ ಏಪ್ರಿಲ್ 1ರಿಂದ ತಯಾರಿಸುವಂತ ಎಲ್ಲಾ ಮಾದರಿಯ ಕಾರುಗಳಿಗೆ ಮುಂದಿನ ಡ್ರೈವರ್ ಹಾಗೂ ಪಕ್ಕದ ಸೀಟ್ ಗಳಿಗೆ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಉದ್ದೇಶಿಸಿದೆ. ಅಲ್ಲದೇ ಈಗಿರುವ ಎಲ್ಲಾ ಮಾದರಿಯ ಕಾರುಗಳ ಮುಂದಿನ ಸೀಟ್ ಗಳಿಗೆ ಏರ್ ಬ್ಯಾಗ್ ಅಳವಡಿಸಿಕೊಳ್ಳಲು ಜೂನ್ 1, 2021ರವರೆಗೆ ಡೆಡ್ ಲೈನ್ ನೀಡಲಾಗಿದೆ.

    ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ, ಅಭಿಪ್ರಾಯಗಳನ್ನೂ ಸಚಿವಾಲಯ ಸಂಗ್ರಹಿಸಲು ಮುಂದಾಗಿದ್ದು, [email protected] ನಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *