Connect with us

LATEST NEWS

ಆಗುಂಬೆ ಘಾಟಿ – ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಏರಿದ ಟ್ರಕ್…!!

ಉಡುಪಿ ಅಗಸ್ಟ್ 05: ಭತ್ತ ತುಂಬಿಕೊಂಡು ಶಿವಮೊಗ್ಗ ದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಟ್ರಕ್ ಒಂದು ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ ಸರಕು ಸಾಗಣೆ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯ ಮೇಲೇರಿ ನಿಂತಿದೆ.


ಸ್ವಲ್ಪ ಮುಂದೆ ಹೋಗಿದ್ದರು ಸರಕು ಸಾಗಣೆ ವಾಹನ ಬೃಹತ್ ಕಂದಕಕ್ಕೆ ಉರುಳುವ ಅಪಾಯವಿತ್ತು‌. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ಚಾಲಕ ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 (ಎ) ರಸ್ತೆ ಇದಾಗಿದ್ದು, ಉಡುಪಿ-ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ.