LATEST NEWS
ಕುಂದಾಪುರದಲ್ಲಿ ಅಗ್ರಿಗೊಲ್ಡ್ ಮಹಿಳಾ ಏಜಂಟ್ ಮೇಲೆ ಹಲ್ಲೆ :ಇಬ್ಬರು ಆಸ್ಪತ್ರೆಗೆ ದಾಖಲು

ಕುಂದಾಪುರದಲ್ಲಿ ಅಗ್ರಿಗೊಲ್ಡ್ ಮಹಿಳಾ ಏಜಂಟ್ ಮೇಲೆ ಹಲ್ಲೆ :ಇಬ್ಬರು ಆಸ್ಪತ್ರೆಗೆ ದಾಖಲು
ಉಡುಪಿ,ಜನವರಿ 17 : ಉಡುಪಿಯಲ್ಲಿ ಅಗ್ರಿಗೊಲ್ಡ್ ಏಜೆಂಟ್ ಮಹಿಳೆಯ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಈ ಘಟನೆ ನಡೆದಿದೆ.
ಹಳ್ಳಿ ಹೊಳೆಯ ರಂಜನ್ ಪೂಜಾರಿ ಎಂಬವರು ಅಗ್ರಿಗೊಲ್ಡ್ ಹಣಕಾಸು ಸಂಸ್ಥೆಗೆ ಅಗ್ರಿಗೋಲ್ಡಿನ ಈ ಮಹಿಳಾ ಏಜಂಟ್ ವಂಸತಿ ಮೂಲಕ 50 ಸಾವಿರ ಹಣ ಪಾವತಿಸಿದ್ದರು.

ಆದರೆ ಹಣ ವಾಪಸ್ಸು ನೀಡಬೇಕಾದ ಅಗ್ರಿ ಗೋಲ್ಡ್ ಕಂಪೆನಿ ಬಾಗಿಲು ಮುಚ್ಚಿ ಪಂಗನಾಮ ಹಾಕಿದೆ.
ಆದ್ದರಿಂದ ಕಟ್ಟಿದ ಹಣವನ್ನು ವಾಪಸ್ಸು ಮಾಡುವಂತೆ ರಂಜನ್ ಪೂಜಾರಿ ಆಗಾಗ ವಂಸತಿಯ ಒತ್ತಾಯ ಮಾಡುತ್ತಾಲೇ ಇದ್ದರು.
ನಿನ್ನೆ ರಂಜನ್ ಪೂಜಾರಿ ನೇರವಾಗಿ ಮಹಿಳಾ ಏಜಂಟ್ ವಂಸತಿಯ ಮನೆಗೆ ಹೋಗಿದ್ದಾರೆ.
ಮಹಿಳೆಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದರೆ ಕರಿಮಣಿ ನೀಡುವಂತೆ ವಂಸತಿಯ ಕುತ್ತಿಗೆ ಕೈ ರಂಜನ್ ಪೂಜಾರಿ ಕೈ ಹಾಕಿದ್ದಾರೆ.
ಈ ಸಂದರ್ಭದಲ್ಲಿ ತಪ್ಪಿಸಲು ಹೋದ ವಂಸತಿಯ ಅಣ್ಣ ಉಮೇಶ್ ಪೂಜಾರಿ ಮತ್ತು ಗಂಡ ರಾಘವೇಂದ್ರ ಪೂಜಾರಿ ಮೇಲೆ ರಂಜನ್ ಪೂಜಾರಿ ಮರಣಾಂತಿಕವಾಗಿ ಹಲ್ಲೆಗೈದಿದ್ದಾರೆ.
ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.