LATEST NEWS
ಸುಪ್ರೀಂಕೋರ್ಟ್ ವಾರ್ನಿಂಗ್ ಬೆನ್ನಲ್ಲೇ ಮತ್ತೆ ದೊಡ್ಡದಾಗಿ ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟಿಸಿದ ಪತಂಜಲಿ ಸಂಸ್ಥೆ
ಹೊಸದಿಲ್ಲಿ ಎಪ್ರಿಲ್ 24 :ಪತಂಜಲಿ ಸಂಸ್ಥೆ ವಿರುದ್ದ ಗರಂ ಆಗಿರುವ ಸುಪ್ರೀಂಕೋರ್ಟ್ ಜನರನ್ನು ದಿಕ್ಕು ತಪ್ಪಿಸುವ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.
ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ ರೀತಿಯಲ್ಲೇ ಕ್ಷಮಾಪಣೆ ಕೇಳಿ ಅಂತ ಸುಪ್ರೀಂಕೋರ್ಟ್ ಹೇಳಿದ್ದರೆ, ಪತಂಜಲಿ ಸಂಸ್ಥೆ ಸಣ್ಣ ಪೋಸ್ಟ್ ಕಾರ್ಡ್ ಸೈಜ್ ನಲ್ಲಿ ಕ್ಷಮಾಪಣೆ ಕೇಳಿತ್ತು. ಇದು ಕೋರ್ಟ್ ಗಮನಕ್ಕೆ ಬರುತ್ತಿದ್ದಂತೆ ಗರಂ ಆದ ನ್ಯಾಯಾಧೀಶರು ನಿಮ್ಮ ಕಂಪನಿಯ ಉತ್ಪನ್ನಗಳ ಜಾಹೀರಾತು ನೀಡುವಂತೆ ಪೂರ್ಣ ಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ಕ್ಷಮಾಪಣೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಕ್ಷಮಾಪಣೆ ಜಾಹೀರಾತನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ ನಿಜ, ಆದರೆ ಅದನ್ನು ಮೈಕ್ರೊಸ್ಕೋಪ್ ಬಳಸಿ ನೋಡುವಂತಿರಬೇಕು ಎಂಬ ಅರ್ಥದಲ್ಲಿ ಅಲ್ಲ,” ಎಂದು ನ್ಯಾಯಾಲಯ ಕುಟುಕಿತು. ”ಕೇವಲ ಕಾಟಾಚಾರಕ್ಕೆ ಚಿಕ್ಕ ಅಕ್ಷರಗಳಲ್ಲಿ ಕ್ಷಮಾಪಣೆ ಜಾಹೀರಾತು ನೀಡಿದರೆ ಸಾಲದು” ಎಂದ ಪೀಠವು, ಕ್ಷಮೆಯಾಚನೆ ಜಾಹೀರಾತು ಗಾತ್ರ ಪರಿಶೀಲಿಸಲು ಮುದ್ರಿತ ಕ್ಷಮೆಯಾಚನೆ ಪ್ರತಿಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಪತಂಜಲಿ ಸಂಸ್ಥೆಗೆ ನಿರ್ದೇಶಿಸಿತು.
ಅದರ ಬೆನ್ನಲ್ಲೇ ಇದು ಮತ್ತೆ ಪೇಪರ್ ಗಳಲ್ಲಿ ಕ್ಷಮಾಪಣೆಯನ್ನು ಪತಂಜಲಿ ಸಂಸ್ಥೆ ಕೇಳಿದೆ. ದೊಡ್ಡ ಗಾತ್ರದಲ್ಲೇ ಈ ಬಾರಿ ಕ್ಷಮಾಪಣೆ ಕೇಳಿ ಸುಪ್ರೀಂಕೋರ್ಟ್ ಹೇಳಿ ಆದೇಶ ಪಾಲಿಸಿದೆ.