Connect with us

LATEST NEWS

ಕೋವಾಕ್ಸಿನ್ ಲಸಿಕೆ ಪಡೆದ ಶೇಕಡ 30 ರಷ್ಟು ಜನರಿಗೆ ಅಡ್ಡಪರಿಣಾಮ – BHU ಅಧ್ಯಯನ ವರದಿ

ಹೊಸದಿಲ್ಲಿ ಮೇ 16: ಇತ್ತೀಚೆಗೆ ಕೋವಿಶಿಲ್ಡ್ ಲಸಿಕೆಯಲ್ಲಿ ಅಡ್ಡಪರಿಣಾಮ ಇದೆ ಎಂದು ವರದಿಯಾದ ಬಳಿಕ ಇದೀಗ ಭಾರತದಲ್ಲೇ ತಯಾರಾದ ಕೋವಾಕ್ಸಿನ್ ಲಸಿಕೆಯಲ್ಲೂ ಅಡ್ಡ ಪರಿಣಾಮ ಇದೆ ಎಂದು ಕೋವಾಕ್ಸಿನ್ ಲಸಿಕೆಯ ದೀರ್ಘಕಾಲೀನ ಪರಿಣಾಮಗಳನ್ನು ಪರೀಕ್ಷಿಸುವ BHU ನಲ್ಲಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.


ಅಧ್ಯಯನದಲ್ಲಿ ಪಾಲ್ಗೊಂಡಿದ್ದ 926 ಮಂದಿ ಪೈಕಿ ಶೇ 50ರಷ್ಟು ಜನರಲ್ಲಿ ಫಾಲೊ ಅಪ್ ಅವಧಿಯಲ್ಲಿ ಸೋಂಕು ಕಂಡುಬಂದಿದೆ. ಉಸಿರಾಟ ವ್ಯವಸ್ಥೆಯಲ್ಲಿ ಸೋಂಕು ಪತ್ತೆಯಾಗಿದೆ. ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮು ಮುಂತಾದ ಲಕ್ಷಣ ಕಂಡುಬಂದಿವೆ ಎಂದು ಅಧ್ಯಯನ ಹೇಳಿದೆ.

ಶೇಕಡ 1ರಷ್ಟು ಪ್ರಕರಣಗಳಲ್ಲಿ ಪಾರ್ಶ್ವವಾಯು, ಗುಲ್ಲೈನ್–ಬರ್ರೆ ಸಿಂಡ್ರೋಮ್(ನರಗಳಿಗೆ ಸಂಬಂಧಿತ ಆರೋಗ್ಯ ಸಮಸ್ಯೆ) ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ. ಜನವರಿ 2022 ರಿಂದ ಆಗಸ್ಟ್ 2023 ರವರೆಗೆ ನಡೆಸಿದ ಅಧ್ಯಯನದಲ್ಲಿ 635 ಹದಿಹರೆಯದವರು ಮತ್ತು 291 ವಯಸ್ಕರು ಕೋವಾಕ್ಸಿನ್ ಲಸಿಕೆಯನ್ನು ಪಡೆದರು. ಹದಿಹರೆಯದವರಲ್ಲಿ ಕಂಡುಬರುವ ಸಾಮಾನ್ಯ AESI ಚರ್ಮ ಮತ್ತು ಸಬ್ಕ್ಯುಟೇನಿಯಸ್ ಅಸ್ವಸ್ಥತೆಗಳು, ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿತ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆ. ಈ ಮೂರೂ ಅಸ್ವಸ್ಥತೆಗಳು ಶೆ 30ರಷ್ಟು ಜನರಲ್ಲಿ ಕಂಡುಬಂದಿದೆ ಎಂದು ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *