Connect with us

LATEST NEWS

ಆಧಾರ್ ಕಾರ್ಡ್ ನವೀಕರಣಗೊಳಿಸಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ

ಉಡುಪಿ; ಜನವರಿ 20: ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ನೊಂದಣಿ ಮಾಡಿಸಿಕೊಂಡ ಪ್ರತಿಯೊಬ್ಬ ಸಾರ್ವಜನಿಕರೂ ತಮ್ಮ ವಿಳಾಸ ದೃಢೀಕರಣ ದಾಖಲೆಯೊಂದಿಗೆ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಣ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.


ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಧಾರ್ ನವೀಕರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ನೀಡಿರುವ ಆಧಾರ್ ವಿಶಿಷ್ಠ ಗುರುತಿನ ಚೀಟಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗಳೂ ಮಾಡಿಸಿಕೊಳ್ಳಬೇಕು,ಈಗಾಗಲೇ ಆಧಾರ್ ಕಾರ್ಡ್ ನೊಂದಣಿಯನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ತಮ್ಮ ವಿಳಾಸ ಗುರುತಿನ ದಾಖಲೆಗಳನ್ನು ನೀಡುವುದರೊಂದಿಗೆ ಕಡ್ಡಾಯವಾಗಿ ನವೀಕರಣಗೊಳಿಸಿಕೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯಲ್ಲಿ 5 ವರ್ಷದೊಳಗಿನ 42312 ಮಕ್ಕಳು ಆಧಾರ್ ನೊಂದಣಿ ಮಾಡಿಸಿಕೊಂಡಿದ್ದು, ಕೈ ಬೆರಳಚ್ಚು ಮತ್ತು ಕಣ್ಣಿನ ಸ್ಕಾö್ಯನ್ ಸೇರಿದಂತೆ ಮತ್ತಿತರ ಬಯೋಮೆಟ್ರಿಕ್ ನೀಡದೇ ಇರುವ , ಪ್ರತಿಯೊಬ್ಬ ಆಧಾರ್ ನೊಂದಣಿ ಮಾಡಿಸಿಕೊಂಡಿರುವ ಮಕ್ಕಳು ಬಯೋಮೆಟ್ರಿಕ್ ನೀಡಬೇಕು ಎಂದರು. ಜಿಲ್ಲೆಯಲ್ಲಿ 13 ಲಕ್ಷಕ್ಕೂ ಅಧಿಕ ಜನರು ಆಧಾರ್ ನೊಂದಣಿಯನ್ನು ಮಾಡಿಸಿಕೊಂಡಿದ್ದು , ಅದರಲ್ಲಿ 15 ವರ್ಷ ಮೇಲ್ಪಟ್ಟ 2 ಲಕ್ಷ ಜನರು ತಮ್ಮ ಮೊಬೈಲ್ ಸಂಖ್ಯೆ ಜೋಡಣೆಯನ್ನು ಮಾಡಿಸದೇ ಇದ್ದು ಅಂತಹವರು ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆ ಜೋಡಣೆ ಹೊಂದಿ, ಸರ್ಕಾರದ ವಿವಿಧ ಯೋಜನೆಗಳ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ಗಳ ಖಾತೆಗೆ ವರ್ಗಾಯಿಸಲು ಸಹ ಸುಲಭವಾಗಲಿದೆ ಎಂದರು.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *