LATEST NEWS
ಅದಮಾರು ಮಠ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ

ಅದಮಾರು ಮಠ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ
ಉಡುಪಿ ಡಿಸೆಂಬರ್ 14: ಅದಮಾರು ಮಠದ ಪರ್ಯಾಯಕ್ಕೆ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದ್ದು, ಪ್ರಥಮದಲ್ಲಿ ಹಂತದಲ್ಲಿ ಬಾಳೆ ಮುಹೂರ್ತ ಇಂದು ರಥಬೀದಿಯ ಮಠದ ಆವರಣದಲ್ಲಿ ನಡೆಯಿತು.
2020ರ ಪರ್ಯಾಯ ಮಹೋತ್ಸವಕ್ಕೆ ಪೂರ್ವ ತಯಾರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ. ಶ್ರೀಕೃಷ್ಣ ಮಠಗಳ ರಥಬೀದಿಯಲ್ಲಿ ಭಕ್ತರು ಬಾಳೆಗಿಡಗಳನ್ನು ಹೊತ್ತು ಮರೆವಣಿಗೆಯಲ್ಲಿ ಸಾಗಿ ಕೃಷ್ಣ ಮುಖ್ಯಪ್ರಾಣನ ಜೊತೆಗೆ ಅನಂತೇಶ್ವರ, ಚಂದ್ರ ಮೌಳೀಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಬಾಳೆ ಮೂಹೂರ್ತಕ್ಕೆ ಚಾಲನೆ ನೀಡಲಾಯಿತು.

ನಂತರ ಅದಮಾರು ಮಠಕ್ಕೆ ಆಗಮಿಸಿ ಎಲ್ಲ ದೇವರ ಪ್ರಸಾದದೊಂದಿಗೆ ವಾದ್ಯ-ವೇದ-ಮಂಗಳ ಘೋಷಗಳೊಂದಿಗೆ ಬಾಳೆಗಿಡ, ತುಳಸೀ ಗಿಡ, ಕಬ್ಬು ಮೊದಲಾದ ಸಸ್ಯ ಸಂಪತ್ತನ್ನು ಮೆರವಣಿಗೆಯ ಮೂಲಕ ನಿಗದಿತ ಸ್ಥಳಕ್ಕೆ ಕೊಂಡೊಯ್ದು ಶುದ್ಧೀಕರಿಸಿದ ಪವಿತ್ರಭೂಮಿಯಲ್ಲಿ ಬಾಳೆ ಗಿಡಗಳನ್ನು ನೆಡಲಾಯಿತು.
ಹೀಗೆ ತಮ್ಮ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ಬೇಕಾಗುವ ಬಾಳೆ ಎಲೆಗಾಗಿ ಗಿಡಗಳನ್ನು, ಅರ್ಚನೆಗಾಗಿ ತುಳಸೀ ಗಿಡಗಳನ್ನು ನೆಡುವ ಮೂಲಕ ಮೊದಲ ಮುಹೂರ್ತ ಸಂಪನ್ನಗೊಂಡಿದೆ.
ಈ ಭಾರಿ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪರ್ಯಾಯಕ್ಕೆ ಬೇಕಾಗುವಷ್ಟು ಬಾಳೆ ಎಲೆಗಳನ್ನು ಸರಬರಾಜು ಮಾಡುವ ದೃಷ್ಟಿಯಿಂದ ಚಾರ ಗ್ರಾಮದ ಕೃಷಿಕರು 5 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಬೆಳೆಸಲು ನಿರ್ಧರಿಸಿದ್ದಾರೆ.