Connect with us

    LATEST NEWS

    ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಅಖಾಡಕ್ಕೀಳಿದ ಟೀಂ ಮೋದಿ

    ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಅಖಾಡಕ್ಕೀಳಿದ ಟೀಂ ಮೋದಿ

    ಮಂಗಳೂರು ಡಿಸೆಂಬರ್ 15: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಮೋ ಬ್ರಿಗೇಡ್ ಈಗ ಮತ್ತೊಮ್ಮೆ ಸಕ್ರಿಯವಾಗಲಿದೆ. ಆದರೆ ಈ ಬಾರಿ ಟೀಂ ಮೋದಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ.

    ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, ನರೇಂದ್ರ ಮೋದಿ ಏಕೆ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವ ಅರಿವು ಜನಸಾಮಾನ್ಯರಲ್ಲಿ ಮೂಡಿಸುವ ನಿಟ್ಟಿನಲ್ಲಿ ಈ ತಂಡ ಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆ ಲೋಕಸಭಾ ಚುನಾವಣೆವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ.

    ಮಂಗಳೂರಿನಲ್ಲಿ ಡಿಸೆಂಬರ್ 16ರಂದು ಸಂಜೆ 4ಕ್ಕೆ ಹಂಪನಕಟ್ಟೆಯಿಂದ ಕೇಂದ್ರ ಮೈದಾನದವರೆಗೆ ಕಾಲ್ನಡಿಗೆ ಮೂಲಕ ‘ಟೀಂ ಮೋದಿ’ ತಂಡ ಅಧಿಕೃತವಾಗಿ ಚಾಲನೆ ಪಡೆಯಲಿದೆ. 400-500 ಮಂದಿ ಜಾಥಾದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

    ಮೋದಿಗಾಗಿ ನಾವು: ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬುದೇ ತಂಡದ ಧ್ಯೇಯವಾಗಿದ್ದು, ರಾಜಕೀಯ ರಹಿತವಾಗಿ ಜನರನ್ನು ತಲುಪುವುದೇ ಟೀಂನ ಉದ್ದೇಶ. ಮೋದಿಯವರ ಹಲವು ಯೋಜನೆಗಳ ಕುರಿತಂತೆ ಜನರಿಗೆ ಮಾಹಿತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಅರಿವು, ಜನಸಾಮಾನ್ಯರಿಗೆ ತಲುಪಿಲ್ಲದ ಯೋಜನೆಗಳು ಸೇರಿ ಹಲವು ವಿಚಾರಗಳ ಬಗ್ಗೆ ಜನರ ಗಮನ ಸೆಳೆಯಲಾಗುತ್ತದೆ.

    ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮೋ ಬ್ರಿಗೇಡ್ ಮೂಲಕ ಮೋದಿ ಅವರ ಪರ ಚುನಾವಣಾ ಪ್ರಚಾರ ನಡೆಸಲಾಗಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಅವರ ಯೋಜನೆಗಳ ಬಗ್ಗೆ ರಾಜ್ಯದಾದ್ಯಂತ ಪ್ರಚಾರ ನಡೆಸಲಾಗಿತ್ತು. ಲೋಕಸಭಾ ಚುನಾವಣೆ ಬಳಿಕ ನಮೋ ಬ್ರಿಗೇಡ್ ವಿಸರ್ಜನೆಗೊಂಡಿತ್ತು. ಈ ಬಾರಿ ಮತ್ತೆ ನಮೋ ಬ್ರಿಗೇಡ್ ಮಾದರಿಯಲ್ಲೇ ಟೀ ಮೋದಿ ಹೆಸರಿನಲ್ಲಿ ಸಂಘಟನೆ ಸಜ್ಜಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಟೀಮ್ ಮೋದಿ ಸಂಘಟನೆ ಕಾರ್ಯಾಚರಣೆ ನಡೆಸಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply