DAKSHINA KANNADA
ಪುತ್ತೂರು ಕಂಬಳದಲ್ಲಿ ಚಿತ್ರ ನಟಿಗೆ ಸಾನಿಯಾ ಅಯ್ಯರ್ ಗೆ ಮುಜುಗರ…!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಪುತ್ತೂರು, ಜನವರಿ 29: ನಗರದಲ್ಲಿ ನಡೆಯುತ್ತಿರುವ ಕೋಟಿ-ಚೆನ್ನಯ ಕಂಬಳದಲ್ಲಿ ಚಿತ್ರ ನಟಿ ಸಾನಿಯಾ ಅಯ್ಯರ್ ಗೆ ಅಭಿಮಾನಿಯೊಬ್ಬ ಕಿರಿಕ್ ಮಾಡಿರುವ ಘಟನೆ ನಡೆದಿದೆ.
ಚಿತ್ರನಟಿ ಸಾನಿಯಾ ಅಯ್ಯರ್ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದು, ವೇದಿಕೆಯಿಂದ ಇಳಿದು ಬರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ಕೆಳುವ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದಿರುವ ಆರೋಪ ಎದುರಾಗಿದೆ, ಇದರಿಂದ ಸಾನಿಯ ಅಯ್ಯರ್ ಮುಜುಗರಕ್ಕೊಳಗಾಗಿದ್ದರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಇದೇ ಅಭಿಮಾನಿ ಸಾನಿಯಾ ಅಯ್ಯರ್ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಹೇಳುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷೀಕೇಶ್ ಸೊನವಣೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
You must be logged in to post a comment Login