Connect with us

FILM

ಕೇರಳ ದೇಗುಲಕ್ಕೆ ಯಾಂತ್ರಿಕ ಆನೆ ದಾನ ಮಾಡಿದ ನಟಿ ಪ್ರಿಯಾಮಣಿ..!

ಕೊಚ್ಚಿ: ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಕೇರಳದ ಪ್ರಸಿದ್ದ ತೃಕ್ಕಾಯಿಲ್​ ಮಹಾದೇವ ದೇಗುಲಕ್ಕೆ ಯಾಂತ್ರಿಕ ಆನೆಯನ್ನು ದಾನ ಮಾಡಿದ್ದಾರೆ.

ಜೀವಂತ ಆನೆಯ ತದ್ರೂಪದಂತಹ ಈ ಯಾಂತ್ರಿಕ ಆನೆಯನ್ನು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಸಹಯೋಗದಲ್ಲಿ ದಾನ ನೀಡಿದ್ದಾರೆ. ತೃಕ್ಕಾಯಿಲ್ ಮಹಾದೇವ ದೇಗುಲದಲ್ಲಿ ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆಗೆ ಬಳಕೆ ಮಾಡದಂತೆ ಅಥವಾ ಬಾಡಿಗೆ ಪಡೆಯದಂತೆ ನಿರ್ಧಾರ ಮಾಡಿದೆ. ಈ ಯಾಂತ್ರಿಕ ಆನೆಗೂ ಮಹಾದೇವನ್​ ಎಂದು ನಾಮಕರಣ ಮಾಡಲಾಗಿದೆ. ದೇಗುಲದ ಆಚರಣೆಯಲ್ಲಿ ಸುರಕ್ಷಿತ ಮತ್ತು ಹಿಂಸೆ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಎಂದು ಪೇಟಾ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೇರಳದ ದೇಗುಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ. ಇನ್ನು ಯಾಂತ್ರಿಕ ಆನೆ ದಾನ ನೀಡಿರುವ ಪ್ರಿಯಾಮಣಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪೇಟಾ ಇಂಡಿಯಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ಮಾಡುತ್ತಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ. ಕಳೆದ ವರ್ಷ ತ್ರಿಸ್ಸೂರ್​ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ರೋಬೊಟಿಕ್​ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತು. ಅದರಂತೆ ಮೊದಲ ಯಾಂತ್ರಿಕೃತ ಆನೆ ತ್ರಿಶೂರ್​ ದೇಗುಲದಲ್ಲಿ ಕಾಣಿಸಿಕೊಂಡಿತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *