LATEST NEWS
ನಟಿ ಹನಿರೋಸ್ ಪೋಟೋಗಳಿಗೆ ಅಶ್ಲೀಲ ಕಮೆಂಟ್ ಮಾಡುವವರ ವಿರುದ್ದ ಪೊಲೀಸ್ ಕಣ್ಣು – ಓರ್ವ ಅರೆಸ್ಟ್
ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ಮಲೆಯಾಳಂ ನಟಿ ಹನಿರೋಸ್ ಅವರ ಪೋಟೋಗಳಿಗೆ ಅಶ್ಲೀಲವಾಗಿ ಕಮೆಂಟ್ ಮಾಡುವವರ ವಿರುದ್ದ ಇದೀಗ ಕೇರಳ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಲೈಂಗಿಕವಾಗಿ ಅನುಚಿತ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ನಟಿ ಫೇಸ್ಬುಕ್ ಪೋಸ್ಟ್ ಮಾಡಿದ ಬೆನ್ನಲ್ಲೇ ಇದೀಗ ಪೊಲೀಸರು ನಟಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿರುವವರ ವಿರುದ್ದ ಕಣ್ಣಿಟ್ಟಿದ್ದಾರೆ.
ಮಲಯಾಳಂ ನಟಿ ಹನಿ ರೋಸ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಕನಿಷ್ಠ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಸಮೀಪದ ಪನಂಗಾಡು ನಿವಾಸಿ ಶಾಜಿ (60) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ನಟಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ಕೊಚ್ಚಿ ಕೇಂದ್ರ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತನ್ನ ಉಡುಗೆ ತೊಡುಗೆಯ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡುವವರ ವಿರುದ್ಧ ರೋಸ್ ಸೋಮವಾರ ಬೇಸರ ವ್ಯಕ್ತಪಡಿಸಿದ್ದರು,. “ಭಾರತೀಯ ಕಾನೂನು ವ್ಯವಸ್ಥೆ ಅನುಮತಿಸದ ಯಾವುದೇ ಉಡುಪನ್ನು ಧರಿಸಿ ನಾನು ಎಂದಿಗೂ ಸಾರ್ವಜನಿಕ ವೇದಿಕೆಗಳಲ್ಲಿ ಹೊರಬಂದಿಲ್ಲ” ಎಂದು ಅವರು ಫೇಸ್ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ನಟಿಯಾಗಿ ತನ್ನ ಕೆಲಸದ ಭಾಗವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿರುವ ರೋಸ್, ಡ್ರೆಸ್ಸಿಂಗ್ ಶೈಲಿಯ ವಿರುದ್ಧ ಯಾವುದೇ ಟೀಕೆಗಳಿಗೆ ಸಮಂಜಸವಾದ ಉತ್ತರವಿರಬೇಖು ಎಂದು ಹೇಳಿದ್ದರು. ಹನಿ ರೋಸ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬೆರಳೆಣಿಕೆಯಷ್ಟು ಚಲನಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ.