FILM
ತಲೆಗೂದಲು ಉದುರುದನ್ನು ನೋಡಲಾಗದೇ ತಲೆ ಬೋಳಿಸಿಕೊಂಡ ನಟಿ
ಮುಂಬೈ ಅಗಸ್ಟ್ 03: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುನ ನಟಿ ಹಿನಾ ಖಾನ್ ಅವರು ತಮ್ಮ ತಲೆಗೂದಲು ಉದುರುವುದನ್ನು ನೋಡಲಾಗದೇ ತಾವೇ ಟ್ರಿಮ್ಮರ್ ಹಿಡಿದು ತಲೆ ಬೋಳಿಸಿಕೊಂಡಿದ್ದಾರೆ.
ತಮಗೆ ಕ್ಯಾನ್ಸರ್ ಇದೆ ಎಂಬುದು ತಿಳಿದಾಗಿನಿಂದ ಹಿನಾ ಖಾನ್ ಅವರು ಅಭಿಮಾನಿಗಳ ಜೊತೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾಯಿಲೆಗೆ ಅವರು ಹೆದರಿಲ್ಲ. ಬದಲಿಗೆ, ತುಂಬ ಧೈರ್ಯದಿಂದ ಇದನ್ನು ಎದುರಿಸಲು ಸಜ್ಜಾಗಿದ್ದಾರೆ. ಅದರ ಮೊದಲ ಹಂತ ಎಂಬಂತೆ ಅವರು ತಲೆ ಬೋಳಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಕೂದಲು ಉದುರಲು ಆರಂಭ ಆಗುತ್ತದೆ. ಪ್ರತಿ ಬಾರಿ ತಲೆಗೆ ಕೈ ಹಾಕಿದಾದ ಕೂದಲು ಉದುರುತ್ತದೆ. ಅದನ್ನು ನೋಡಿದಾಗಲೆಲ್ಲ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಮಹಿಳೆಯರಿಗೆ ಈ ಪರಿ ಕೂದಲು ಉದುರಿದರೆ ಹೆಚ್ಚು ಬೇಸರ ಆಗುತ್ತದೆ. ಇದರಿಂದ ಒಮ್ಮೆಲೆ ಮುಕ್ತಿ ಪಡೆಯಲು ಹಿನಾ ಖಾನ್ ಅವರು ಪೂರ್ತಿ ತಲೆ ಬೋಳಿಸಿಕೊಂಡಿದ್ದಾರೆ. ಅಗತ್ಯ ಇರುವಾಗ ತಾವು ವಿಗ್ ಧರಿಸುವುದಾಗಿ ಅವರು ತಿಳಿಸಿದ್ದಾರೆ. ತಾವು ತಲೆ ಬೋಳಿಸಿಕೊಂಡ ವಿಡಿಯೋವನ್ನು ಹಿನಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೈಹಿಕ ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ಇರಬೇಕು ಎಂದು ಅವರು ಹೇಳಿದ್ದಾರೆ.
You must be logged in to post a comment Login