FILM
ಕುಡಿದ ಮತ್ತಿನಲ್ಲಿ ಮಲಯಾಳಂ ನಟ ವಿನಾಯಕನ್ ಅಶ್ಲೀಲ ವರ್ತನೆ – ವಿಡಿಯೋ ವೈರಲ್
ಕೇರಳ ಜನವರಿ 22: ಕುಡಿದ ಮತ್ತಿನಲ್ಲಿ ಮಲೆಯಾಳಂ ನಟ ವಿನಾಯಕನ್ ಅವರು ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಲ್ಯಾಟ್ ಒಂದರ ಬಾಲ್ಕನಿಯಲ್ಲಿ ವಿನಾಯಕ್ ಅವರು ತಮ್ಮ ನೆರೆಹೊರೆಯವರೊಂದಿಗೆ ಗಲಾಟೆ ಮಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ವೇಳೆ ಸರಿಯಾಗಿ ನಿಲ್ಲಲು ಆಗದೆ, ತಮ್ಮ ಬಟ್ಟೆ ಸರಿಪಡಿಸಲು ಒದ್ದಾಡುತ್ತಿರುವುದು ಕಂಡು ಬಂದಿದೆ.
ಹತ್ತಿರದ ಕಟ್ಟಡದಿಂದ ವ್ಯಕ್ತಿಯೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ನಟ ವಿನಾಯಕನ್ ಕ್ಷಮೆ ಕೇಳಿದ್ದಾರೆ. ಸಿನೆಮಾ ನಟನಾಗಿ ನನ್ನ ಜೀವನದ ಕೆಲವು ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನಾನು ಮಾಡಿರುವ ಕೆಟ್ಟ ವಿಷಯಗಳಿಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ನಿರ್ದೇಶಕ ನೆಲ್ಸನ್ ಅವರ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಪ್ರಮುಖ ವಿಲನ್ ಆಗಿ ನಟಿಸುವ ಮೂಲಕ ರಾಷ್ಟ್ರೀಯ ಖ್ಯಾತಿಗೆ ಏರಿದ ವಿನಾಯಕನ್ ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಈ ಮೊದಲು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕುಡಿತ ಎಂತವರ ಜೀವನವನ್ನು ಹಾಳುಮಾಡುತ್ತದೆ ಎನ್ನುವುದಕ್ಕೆ ಉದಾಹರಣೆ ಇದಾಗಿದೆ.
Feeling sorry for Vinayakan .
Whoever you may be – if u become a friend of alcohol , it will destroy you ! pic.twitter.com/L96L7KaBZB
— Prashanth Rangaswamy (@itisprashanth) January 21, 2025