Connect with us

  FILM

  ನುಡಿದಂತೆ ನಡೆದ ನಟ,ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಿದ ದುನಿಯಾ ವಿಜಯ್..!

  ಬೆಂಗಳೂರು : ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್ ನೋಡಲು ಒರಟ, ರಫ್ ಅಂಡ್ ಟಫ್ ಕಂಡರೂ ಹೃಯ ಮಾತ್ರ ಅಷ್ಟೇ ಸಾಫ್ಟ್. ಆನೇಕ ಸಮಾಜಮುಖಿ ಕಾರ್ಯಗಳನ್ನು ಸದ್ದಿಲ್ಲದೇ ಮಾಡುವ ಈ ದುನಿಯಾ ವಿಜಯ್ ಇದೀಗ 6 ಜನರು ಖೈದಿಗಳನ್ನು ಬಿಡುಗಡೆ ಮಾಡಲು ನೆರವಾಗಿದ್ದಾರೆ.

  ಮೊನ್ನೆಯಷ್ಟೇ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಅಮಾಯಕ ಜೀವಿಗಳ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದು ನಟ ವಿಜಯ್ ಅವರು ಮಾತು ಕೊಟ್ಟಿದ್ದರು.ಇದೀಗ ಅವರು ಹೇಳಿದಂತೆಯೇ ಮಾಡಿ ತೋರಿಸಿದ್ದಾರೆ. ಇಂದು ಗುರುವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ 6 ಜನ ಖೈದಿಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಇಂತಹ ನೋವು ಯಾರಿಗೂ ಬಾರದಿರಲಿ ಎಂದು ವಿಜಯ್ ಖೈದಿಗಳಿಗೆ ಹಾರೈಸಿದ್ದಾರೆ. ಸದ್ಯ ನಟ ಭೀಮ ಸಿನಿಮಾದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದ ಎರಡನೇ ಹಾಡು ಜಬರ್‌ದಸ್ತ್ ಆಗಿದೆ. ಐ ಲವ್ ಯು ಕಣೇ ಅನ್ನುವ ವಿಜಯ್ ಅವರ ಹಾಡು ಈಗಾಗಲೇ ಭಾರೀ ಜನಪ್ರಿಯತೆ ಗಳಿಸಿದೆ. ಸೈಕ್ ಅನ್ನುವ ಪದ ಭೀಮಾ ಚಿತ್ರದಲ್ಲಿ ಜಾಸ್ತಿನೇ ಇದೆ. ಹಾಡಿನಲ್ಲೂ ಪದ ಇದೆ. ಬ್ಯಾಡ್ ಬಾಯ್ ಅನ್ನುವ ಹಾಡನ್ನ ನೋಡಿದವರು ಸೈಕ್ ಆಗಿಯೇ ಇದೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.ದುನಿಯಾ ವಿಜಯ್ ದೊಡ್ಮಗಳು ಮೋನಿಕಾ ಕೂಡ ಅಪ್ಪನಂತೆ ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಹಾಗೆ ಸಿನಿರಂಗಕ್ಕೆ ಬರೋ ಮೊದಲು ಮೋನಿಕಾ ಮುಂಬೈಯಲ್ಲಿ ನಟನಾ ತರಬೇತಿಯನ್ನು ಪಡೆಯುತ್ತಿದ್ದಾರಂತೆ.

  Share Information
  Advertisement
  Click to comment

  You must be logged in to post a comment Login

  Leave a Reply