Connect with us

FILM

ಕಾರ್ ರೇಸ್ ಪ್ರ್ಯಾಕ್ಟಿಸ್ ವೇಳೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ – ಕೂದಲೆಳೆ ಅಂತರದಲ್ಲಿ ನಟ ಪಾರು

ದುಬೈ ಜನವರಿ 07: ದುಬೈನಲ್ಲಿ ನಡೆಯಲಿರುವ 24ಎಚ್ ದುಬೈ 2025 ಕಾರ್ ರೇಸಿಂಗ್ ನ ತರಬೇತಿ ವೇಳೆ ತಮಿಳು ನಟ ಅಜಿತ್ ಕುಮಾರ್ ಡ್ರೈವ್ ಮಾಡುತ್ತಿದ್ದ ರೇಸಿಂಗ್ ಕಾರ್ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ನಟ ಅಜಿತ್ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆತಂಕದಲ್ಲಿದ್ದಾರೆ.


ದುಬೈನಲ್ಲಿ ನಡೆಯಲಿರುವ ರೇಸಿಂಗ್ ಚಾಂಪಿಯನ್ ಶಿಪ್ ಗೆ ಅಜಿತ್ ಅವರು ತೆರಳಿದ್ದಾರೆ. ಈ ರೇಸಿಂಗ್ ಚಾಂಪಿಯನ್ ಶಿಫ್ ನಲ್ಲಿ ಅಜಿತ್ ಅವರು ಭಾಗವಹಿಸಲಿದ್ದಾರೆ. 24 ಗಂಟೆಗಳ ಕಾಲ ನಡೆಯಲಿರುವ ಈ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಜಿತ್ ಕುಮಾರ್ ಅವರು 6 ಗಂಟೆಗಳ ಕಾಲ ಕಾರನ್ನು ಓಡಿಸಲಿದ್ದಾರೆ.


ಈ ಹಿನ್ನಲೆ ಕಾರ್ ರೇಸಿಂಗ್ ಟ್ರ್ಯಾಕ್ ತರಭೇತಿ ವೇಳೆ ಅಜಿತ್ ಕುಮಾರ್ ಅವರು 180 ಕಿಲೋ ಮೀಟರ್ ವೇಗದಲ್ಲಿ ಕಾರನ್ನು ಡ್ರೈವ್ ಮಾಡುತ್ತಿದ್ದರು. ಇನ್ನೇನು ಗುರಿ ಮುಟ್ಟಲು ಕೆಲವೇ ದೂರ ಇರುವಾಗ ಅವರ ಕಾರು ನಿಯಂತ್ರಣ ತಪ್ಪಿ ಟ್ರ್ಯಾಕ್ ನ ಗೊಡೆಗೆ ಗುದ್ದಿ, ಕಾರು ಮೂರು ನಾಲ್ಕು ಬಾರಿ ತಿರುಗಿದೆ. ಅದೃಷ್ಟವಶಾತ್ ಅಜಿತ್ ಕುಮಾರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *