FILM
ಜಾಕ್ವೆಲಿನ್ ಫರ್ನಾಂಡಿಸ್ ಗೆ ಲುಕ್ಔಟ್ ನೋಟಿಸ್ – ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು
ಮುಂಬೈ ಡಿಸೆಂಬರ್ 06: ಇಡಿಯಿಂದ ಲುಕ್ ಔಟ್ ನೋಟಿಸ್ ಬೆನ್ನಲ್ಲೆ ದೇಶ ತೊರೆಯಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ವಲಸೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಇಂದು ಜಾಕ್ವೆಲಿನ್ ಕಾರ್ಯಕ್ರಮವೊಂದಕ್ಕಾಗಿ ದುಬೈಗೆ ಹೋಗಲು ಮುಂದಾದಾಗ ಏರ್ಪೋರ್ಟ್ನಲ್ಲೇ ತಡೆಯಲಾಗಿದೆ. ಇದೀಗ ನಟಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ.
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಜೊತೆ ನಟಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ. ಕಳೆದ ಒಂದು ವಾರದಿಂದ ಸುಖೇಶ್ ಹಾಗೂ ಜಾಕ್ವೆಲಿನ್ ವೈಯಕ್ತಿಯ ಫೋಟೋಗಳು ಎನ್ನಲಾದ ಫೋಟೋಗಳು ಸಾಕಷ್ಟು ಸುದ್ದಿ ಮಾಡಿದ್ದವು. ಇನ್ನು ಜಾಕಲಿನ್ ಅವರಿಗೆ ಚಂದ್ರಶೇಖರ್ ₹ 10 ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದು ಬಯಲಾಗಿದೆ. ಇದರಲ್ಲಿ ₹ 52 ಲಕ್ಷ ಮೌಲ್ಯದ ಕುದುರೆ ಮತ್ತು ₹ 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.