Connect with us

FILM

‘ದಿ ವ್ಯಾಕ್ಸಿನ್ ವಾರ್’ ಶೂಟಿಂಗ್ ಸೆಟ್ ನಲ್ಲಿ ಅವಘಡ: ನಟಿ ಪಲ್ಲವಿ ಜೋಶಿಗೆ ಗಾಯ

ಹೈದರಾಬಾದ್, ಜನವರಿ 17: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪತ್ನಿ ಹಾಗೂ ನಟಿ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ. ದಿ ವ್ಯಾಕ್ಸಿನ್ ವಾರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು, ಶೂಟಿಂಗ್ ವೇಳೆಯಲ್ಲಿ ನಡೆದ ಅವಘಡದಿಂದ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಂತರ ದಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು ನಿರ್ದೇಶಕ ವಿವೇಕ್, ಒಂದು ಹಂತದ ಶೂಟಿಂಗ್ ಮುಗಿಸಿಕೊಂಡು, ಎರಡನೇ ಹಂತದ ಚಿತ್ರೀಕರಣಕ್ಕಾಗಿ ಅವರು ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಪಲ್ಲವಿ ಜೋಶಿ ಅವರು ಚಿತ್ರೀಕರಣಕ್ಕೆ ಬಂದಾಗ, ಕಾರು ಅಪಘಾತವಾಗಿ ಗಾಯಗೊಂಡಿದ್ದಾರೆ. ಆತಂಕ ಪಡುವಂತಹದ್ದು ಏನೂ ಆಗಿಲ್ಲವಾದರೂ, ಚಿತ್ರೀಕರಣವನ್ನು ನಿಲ್ಲಿಸಿದ್ದಾರಂತೆ ವಿವೇಕ್.

ಅಂದುಕೊಂಡಂತೆ ಆಗಿದ್ದರೆ, ಈ ಹಂತದ ಚಿತ್ರೀಕರಣದಲ್ಲೇ ಕಾಂತರ ನಟಿ ಸಪ್ತಮಿ ಗೌಡ ಭಾಗಿಯಾಗಬೇಕಿತ್ತು. ಇಂದಿನಿಂದ ಅವರ ಭಾಗದ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಶೂಟಿಂಗ್ ನಿಲ್ಲಿಸಿದ ಕಾರಣದಿಂದಾಗಿ ಸಪ್ತಮಿ ಗೌಡ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಪಲ್ಲವಿ ಜೋಶಿ ಅವರ ಜೊತೆ ಸಪ್ತಮಿ ಗೌಡ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ಹೊಸ ರೀತಿಯ ಪಾತ್ರವಂತೆ.

ಕೊರೋನಾ ವೇಳೆಯಲ್ಲಿ ವ್ಯಾಕ್ಸಿನ್ ಎಷ್ಟು ಮಹತ್ವವಾಗಿತ್ತು, ವ್ಯಾಕ್ಸಿನ್ ಗಾಗಿ ಎಷ್ಟೆಲ್ಲ ತಲ್ಲಣಗಳನ್ನು ಸೃಷ್ಟಿ ಮಾಡಲಾಯಿತು. ವ್ಯಾಕ್ಸಿನ್ ಹಿಂದಿನ ನಿಜವಾದ ಕಹಾನಿಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ವ್ಯಾಕ್ಸಿನ್ ವಿಷಯದಲ್ಲಿ ಭಾರತವೇ ಹೆಮ್ಮೆ ಪಡುವಂತಹ ವಿಷಯವನ್ನೂ ಅವರು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ. ಆರೇಳು ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಕೂಡ ಆಗಲಿದೆ ಎನ್ನುವ ಮಾಹಿತಿ ಇದೆ.

Advertisement
Click to comment

You must be logged in to post a comment Login

Leave a Reply