DAKSHINA KANNADA
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟ್ರಕ್ ನಾಲೆಗೆ : ಇಬ್ಬರ ರಕ್ಷಣೆ..!
ಮಂಗಳೂರು, ಜನವರಿ 17: ಮಂಗಳೂರು ನಗರದ ಜಪ್ಪಿನ ಮೊಗರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟ್ರಕ್ ಒಂದು ಅಪಘಾತಕ್ಕೀಡಾಗಿದೆ.
ಸೋಮವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ತಮಿಳುನಾಡು ನೋಂದಣಿಯ TN 24- m- 1871 ಈ ಲಾರಿ ವೈಟ್ ಸಿಮೆಂಟ್ ಸರಕು ತುಂಬಿಕೊಂಡು ಕೇರಳದತ್ತ ಚಲಿಸುತ್ತಿದ್ದಾಗ ಲಾರಿಯ ಮುಂಭಾಗದ ಟಯರು ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮಲಿನ ನೀರು ಶೇಖರಣೆಯಾಗುತ್ತಿದ್ದ ಕೊಳಚೆ ಗುಂಡಿಗೆ ಬಿದ್ದಿದೆ.
ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ ಸ್ಥಳೀಯರು ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಲಾರಿಯಲ್ಲಿ ಡ್ರೈವರ್ ಸೇರಿ ಇಬ್ಬರು ಇದ್ದು ಓರ್ವನನ್ನು ಸ್ಥಳಿಯರು ಹರ ಸಾಹಸ ಪಟ್ಟು ರಕ್ಷಿಸಿದ್ದಾರೆ. ಮತ್ತೋರ್ವ ಟ್ರಕ್ನಲ್ಲಿ ಸಿಲುಕಿಕೊಂಡಿದ್ದು ಆತನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
You must be logged in to post a comment Login