Connect with us

    LATEST NEWS

    ಐಸ್ ಕ್ರೀಂ ತಿನ್ನಲು ಹೋಗಿದ್ದ ಯುವಕ ಅಪಘಾತದಲ್ಲಿ ಸಾವು…!!

    ಸುರತ್ಕಲ್ ಎಪ್ರಿಲ್ 23: ಸ್ಕೂಟರ್ ಪಲ್ಟಿಯಾಗಿ ಬಾಲಕನೋರ್ವ ಸಾವನಪ್ಪಿದ ಘಟನೆ ಸೂರಿಂಜೆಯ ಕೋಟೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ಸೂರಿಂಜೆ ಕೋಟೆ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಪುತ್ರ ಮುಹಮ್ಮದ್ ಸೈಫ್ (13) ಎಂದು ಗುರುತಿಸಲಾಗಿದೆ.


    ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಆರು ಮಂದಿ ಸ್ನೇಹಿತರು ಮೂರು ದ್ವಿಚಕ್ರ ವಾಹನಗಳಲ್ಲಿ ಸೂರಿಂಜೆಯಿಂದ ಸುರತ್ಕಲ್ ಗೆ ಐಸ್ ಕ್ರೀಮ್ ತಿನ್ನಲು ತೆರಳುತ್ತಿದ್ದರು‌. ಈ ವೇಳೆ ಮನ್ಸೂರ್ ಎಂಬವರ ದ್ವಿಚಕ್ರ ವಾಹನದಲ್ಲಿ ಸೈಫ್ ಹಿಂಬದಿ ಸವಾರನಾಗಿದ್ದ. ಇವರಿದ್ದ ಸ್ಕೂಟರ್ ಸೂರಿಂಜೆಯ ಕೋಟೆ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ರಭಸಕ್ಕೆ ಸೈಫ್ ಅವರ ತಲೆ ಡಾಂಬರ್ ರಸ್ತೆಗೆ ಬಲವಾಗಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದು ಬಂದಿದೆ.
    ಈತ ಸೂರಿಂಜೆಯ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.
    ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply