Connect with us

UDUPI

ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ಹಿಂಬದಿ ಸವಾರನ ಸಾವು

ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ಹಿಂಬದಿ ಸವಾರನ ಸಾವು

ಉಡುಪಿ ಅಕ್ಟೋಬರ್ 8: ಬೈಕ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ದಾರುಣವಾಗಿ ಸಾವನಪ್ಪಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕಿನ ಕಡ್ಲೂರು ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ, ಮೃತ ವ್ಯಕ್ತಿಯನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ನಾಗರಾಜ್ ಬರುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಟೆಂಪೋ 407 ಡಿಕ್ಕಿ ಹೊಡೆದಿದೆ.

ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನ ಹಿಂಬದಿ ಸವಾರ ನಾಗರಾಜ್ ರಸ್ತೆಗೆಯಲ್ಪಟ್ಟಿದ್ದಾನೆ. ನಂತರ ನಾಗರಾಜ್ ಮೇಲೆ ಟೆಂಪೋ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments