LATEST NEWS
ಕೃಷಿ ಅಧಿಕಾರಿ ಮನೆಗೆ ಎಸಿಬಿ ದಾಳಿ : ಅಪಾರ ಪ್ರಮಾಣದಲ್ಲಿ ನಗದು, ದಾಖಲೆ ವಶ

ಕೃಷಿ ಅಧಿಕಾರಿ ಮನೆಗೆ ಎಸಿಬಿ ದಾಳಿ : ಅಪಾರ ಪ್ರಮಾಣದಲ್ಲಿ ನಗದು, ದಾಖಲೆ ವಶ
ಮಂಗಳೂರು,ಡಿಸೆಂಬರ್ 13 :ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಿನ್ನಿಗೋಳಿಯಲ್ಲಿ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ಅಧಿಕಅರಿಗಳು ದಾಳಿ ನಡೆಸಿದ್ದಾರೆ.
ಪಕ್ಷಿಕೆರೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್. ಮಿರಂದಾ ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಡಿವೈಎಸ್ ಪಿ ಸುದೀರ್ ಹೆಗ್ಡೆ ಅವ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಅವರು ಕೆಲಸ ಮಾಡುತ್ತಿದ್ದ ಕೃಷಿ ಕೇಂದ್ರದ ಕಚೇರಿ ಮೇಲೂ ದಾಳಿ ಮಾಡಿದ್ದಾರೆ. ಇನ್ನೂ ಕೇವಲ ಮೂರೇ ತಿಂಗಳಲ್ಲಿ ಮಿರಾಂದ ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗುವವರಿದ್ದರು.